ಇದೇ ಮೊದಲ ಬಾರಿಗೆ ಭಕ್ತರ ಜತೆಗೂಡಿ ಸತತ ಮೂರು ದಿನಗಳ ಕಾಲ ರೈಲಿನಲ್ಲಿ ಪ್ರಯಾಣಿಸುತ್ತಿರುವುದಾಗಿ ಶ್ರೀಗಳು ಸಂತಸ ಹಂಚಿಕೊಂಡರು. ಮೈಸೂರಿನಿಂದ ಸುಮಾರು 1,300 ಭಕ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಹೈದರಾಬಾದ್‌ನಲ್ಲಿ ಮತ್ತಷ್ಟು ಭಕ್ತರು ಸೇರಿಕೊಳ್ಳಲಿದ್ದಾರೆ. ಈಗಾಗಲೇ ಅನೇಕರು ಅಯೋಧ್ಯೆ ತಲುಪಿದ್ದಾರೆ ಎಂದು ಶ್ರೀಗಳು ತಿಳಿಸಿದರು.