ಸ್ವಾಸ್ಥ್ಯ ಮೈಸೂರು ಅನುಷ್ಠಾನಕ್ಕೆ ಕೈ ಜೋಡಿಸಿ

ಸ್ವಸ್ಥ ಮೈಸೂರು ಕುರಿತ ಜಾಗೃತಿ ಕಾರ್ಯಕ್ರಮವನ್ನು ಪ್ರಮೋದಾದೇವಿ ಒಡೆಯರ್ ಸೋಮವಾರ ಉದ್ಘಾಟಿಸಿದರು. ಡಾ.ಖಾದರ್ ವಲಿ, ಡಾ.ಪಿ.ಸಿ.ಕುಮಾರಸ್ವಾಮಿ, ಡಾ.ಡಿ.ಜಿ.ನಾಗರಾಜ್, ಡಾ.ಸಿರಾಜ್ ಇತರರಿದ್ದರು.
ಸ್ವಸ್ಥ ಮೈಸೂರು ಕುರಿತ ಜಾಗೃತಿ ಕಾರ್ಯಕ್ರಮವನ್ನು ಪ್ರಮೋದಾದೇವಿ ಒಡೆಯರ್ ಸೋಮವಾರ ಉದ್ಘಾಟಿಸಿದರು. ಡಾ.ಖಾದರ್ ವಲಿ, ಡಾ.ಪಿ.ಸಿ.ಕುಮಾರಸ್ವಾಮಿ, ಡಾ.ಡಿ.ಜಿ.ನಾಗರಾಜ್, ಡಾ.ಸಿರಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ವಸ್ಥ ಮೈಸೂರು ಅನುಷ್ಠಾನಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು
  • ಮೈಸೂರು ಮೈಸೂರಾಗಿಯೇ ಉಳಿಯಬೇಕು
ಮೈಸೂರು: ಇತ್ತೀಚಿನ ದಿನಗಳಲ್ಲಿ ಮೈಸೂರಿನ ಸ್ವಾಸ್ಥ್ಯ ಹಾಳಾಗಿದೆ. ಸ್ವಸ್ಥ ಮೈಸೂರು ಅನುಷ್ಠಾನಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸಲಹೆ ನೀಡಿದರು.\
ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್, ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಸಹಯೋಗದಲ್ಲಿ ನಗರದಲ್ಲಿ ವಾಣಿವಿಲಾಸ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸ್ವಸ್ಥ ಮೈಸೂರು ಜಾಗೃತಿ, ಸ್ವಾಸ್ಥೃ ಮತ್ತು ಪೌಷ್ಟಿಕಾಂಶ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ಬೆಳವಣಿಗೆಯಿಂದ ವಿವಿಧ ಸ್ತರಗಳಲ್ಲಿ ಮೈಸೂರಿನ ಸ್ವಾಸ್ಥ್ಯ ಹಾಳಾಗುತ್ತಿದೆ. ಮೈಸೂರು ಮೈಸೂರಾಗಿಯೇ ಉಳಿಯಬೇಕು. ಇದೇ ಕಾರಣದಿಂದ ಸ್ವಾಸ್ಥ್ಯ ಮೈಸೂರು ಅನುಷ್ಠಾನಕ್ಕೆ ಮುಂದಾಗಿದ್ದೇವೆ. ಇದಕ್ಕೆ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಕೋರಿದರು.
ಪೌಷ್ಟಿಕಾಂಶ ತಜ್ಞ ಡಾ.ಖಾದರ್ ವಲಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ.ಡಿ.ಜಿ.ನಾಗರಾಜ್, ಜಿಲ್ಲಾ ಆರೋಗ್ಯ ಕಚೇರಿ ಸಂಯೋಜಕಿ ಡಾ.ಅರ್ಚನಾ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಸಿರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net