ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ್ ಮಾತನಾಡಿ, ಕೈಗಾರಿಕಾ ಉತ್ಪನ್ನಗಳಷ್ಟೇ ಅಲ್ಲದೆ ಕೃಷಿ, ತೋಟಗಾರಿಕೆ, ಪಶುಪಾಲನೆ ವಸ್ತುಗಳನ್ನು ರಫ್ತು ಮಾಡಲು ಅವಕಾಶವಿದ್ದು, ಇದರ ಬಗ್ಗೆ ತಿಳಿಸಿಕೊಳ್ಳಬೇಕು. ಈ ದೃಷ್ಟಿಯಿಂದ ರಫ್ತು ಸಹಾಯಕೇಂದ್ರ ತೆರೆಯುವ ಪ್ರಯತ್ನ ನಡೆದಿದೆ. ಮೈಸೂರು ಕೈಗಾರಿಕಾ ಸಂಘದ ಸಹಯೋಗದಲ್ಲಿ ಸಹಾಯ ಕೇಂದ್ರದ ಕಟ್ಟಡವು ಸಹ ಪ್ರಗತಿಯಲ್ಲಿದ್ದು, ಶೀಘ್ರವೇ ಸಹಾಯ ಕೇಂದ್ರ ಕೆಲಸ ಆರಂಭಗೊಳ್ಳಲಿದೆ ಎಂದರು.