ಅಧ್ಯಕ್ಷರಾಗಿ ಜೆಡಿಎಸ್‌ನ ಸಿದ್ದರಾಮೇಗೌಡ ಅವಿರೋಧವಾಗಿ ಆಯ್ಕೆ

ಬನ್ನೂರಿನ ಸಮೀಪದ ದೊಡ್ಡಮುಲಗೂಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿದ್ದರಾಮೇಗೌಡ ಆಯ್ಕೆಯಾದರು. ವೈ.ಎಸ್, ರಾಮುಸ್ವಾಮಿ, ಕಲ್ಪನಾನಾಗರಾಜು, ಕೆ. ಶಶಿಕುಮಾರ್, ಸುರೇಶ್, ಮಾಜಿ ಅಧ್ಯಕ್ಷ ಅಂಕೇಗೌಡ, ಪಂಚಲಿಂಗೇಗೌಡ ಮೊದಲಾದವರು ಇದ್ದರು.
ಬನ್ನೂರಿನ ಸಮೀಪದ ದೊಡ್ಡಮುಲಗೂಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿದ್ದರಾಮೇಗೌಡ ಆಯ್ಕೆಯಾದರು. ವೈ.ಎಸ್, ರಾಮುಸ್ವಾಮಿ, ಕಲ್ಪನಾನಾಗರಾಜು, ಕೆ. ಶಶಿಕುಮಾರ್, ಸುರೇಶ್, ಮಾಜಿ ಅಧ್ಯಕ್ಷ ಅಂಕೇಗೌಡ, ಪಂಚಲಿಂಗೇಗೌಡ ಮೊದಲಾದವರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ
ಬನ್ನೂರು: ಪಟ್ಟಣದ ಸಮೀಪದ ದೊಡ್ಡಮುಲಗೂಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿದ್ದರಾಮೇಗೌಡ ಅವಿರೋಧವಾಗಿ ಆಯ್ಕೆಯಾದರು.
12 ಸದಸ್ಯರ ಬಲವನ್ನು ಹೊಂದಿರುವ ದೊಡ್ಡಮುಲಗೂಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 7 ಮಂದಿ ಜೆಡಿಎಸ್‌ನ ಸದಸ್ಯರಿದ್ದು, ಬುಧವಾರ ಅಧ್ಯಕ್ಷರ ಆಯ್ಕೆಗಾಗಿ ಚುನಾವಣಾಧಿಕಾರಿ ನಾರಾಯಣ್ ನೇತೃತ್ವದಲ್ಲಿ ಸಭೆ ನಡೆದು, ಅಧ್ಯಕ್ಷರ ಹುದ್ದೆಗೆ ಜೆಡಿಎಸ್‌ನ ಸಿದ್ದರಾಮೇಗೌಡ ಮಾತ್ರವೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನೇ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.
ನಂತರ ಮಾತನಾಡಿದ ಸಿದ್ದರಾಮೇಗೌಡ ದೊಡ್ಡಮುಲಗೂಡು ಗ್ರಾಮದ ತಾಲ್ಲೂಕಿನ ಗಡಿಭಾಗವಾಗಿದೆ. ಕೃಷಿ ಚಟುವಟಿಕೆಯಾದರಿತ ಜೀವನ ನಡೆಸುವವರೇ ಹೆಚ್ಚಾಗಿ ಈ ಭಾಗದಲ್ಲಿರುವುದರಿಂದ ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುವುದಾಗಿ ಅವರು ತಿಳಿಸಿದರು.
ಜೆಡಿಎಸ್‌ನ ರಾಜ್ಯ ಕಾರ್ಯಾಧ್ಯಕ್ಷ ವೈ.ಎಸ್. ರಾಮಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರುವುದರಿಂದ ಎಲ್ಲ ಕಡೆಗಳಲ್ಲೂ ಜೆಡಿಎಸ್ ಸದಸ್ಯರನ್ನು ಬೆಂಬಲಿಸುವ ಮೂಲಕ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಈಗಿನಿಂದಲೇ ಸಿದ್ಧರಾಗಬೇಕೆಂದು ಕರೆ ನೀಡಿದರು.
ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ಅವರು ಬರುವ ನಿರೀಕ್ಷೆಯಲ್ಲಿದ್ದು, ಅವರ ಕೈ ಬಲಪಡಿಸಲು ಎಲ್ಲೆಡೆಡ ಸ್ಥಳೀಯ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ದೊಡ್ಡಮುಲಗೂಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಕಲ್ಪನಾ ನಾಗರಾಜು, ಕೆ. ಶಶಿಕುಮಾರ್, ಸುರೇಶ್, ಮಾಜಿ ಅಧ್ಯಕ್ಷ ಅಂಕೇಗೌಡ, ಪಂಚಲಿಂಗೇಗೌಡ, ಗೋವಿಂದ, ಲಕ್ಷ್ಮಮ್ಮ, ಡಿ.ಕೆ. ಜಯರಾಂ, ಮೇಲ್ವಿಚಾರಕರಾದ ಮಂಜೇಶ್‌ಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್‌ಗೌಡ, ಬಿ.ಆರ್. ಲೋಕೇಶ್, ಮೆಣಸಿಕ್ಯಾತನಹಳ್ಳಿ ಮಧು, ಗ್ರಾಮದ ಮುಖಂಡ ರಾಜೇಶ್, ಕೆ. ಚನ್ನೇಗೌಡ, ಸೀಹಳ್ಳಿ ರಾಜೂಗೌಡ, ಶ್ರೀಧರ್, ಡಿ.ಎಚ್, ರಮೇಶ್ ಸೇರಿದಂತೆ ಗ್ರಾಮದ ಪ್ರಮುಖರು, ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net