ವಿಧಾನಸಭೆ ಜಂಟಿ ಅಧಿವೇಶನದಲ್ಲಿ ಏನೆಲ್ಲ ವಿಚಾರ ನಡೆಯಿತು ಎಂಬುದನ್ನು ರಾಜ್ಯಪಾಲರು ರಾಷ್ಟ್ರಪತಿಗೆ ತಿಳಿಸಿದ್ದಾರೆ. ಸಂವಿಧಾನ ಪ್ರಕಾರ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಸರ್ಕಾರ ನೀಡಿದ ಭಾಷಣವನ್ನು ಕಡ್ಡಾಯವಾಗಿ ಓದಬೇಕಾಗಿತ್ತು. ಆದರೆ, ಅವರು ಓದಲಿಲ್ಲ. ಗಣರಾಜ್ಯೋತ್ಸವ ಸಂದರ್ಭದಲ್ಲೂ ನಾವು ನಮ್ಮ ಭಾಷಣ ಬರೆದುಕೊಡುತ್ತೇವೆ. ಆದರೆ, ಅವರು ಬದಲಾಯಿಸಿಕೊಳ್ಳುವ ಸಾಧ್ಯತೆ ಇದೆ ಎಂದರು.