2028ಕ್ಕೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 66ನೇ ಹುಟ್ಟುಹಬ್ಬದ ಅಂಗವಾಗಿ ಪಿರಿಯಾಪಟ್ಟಣ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ.ಮಹದೇವ್ ಉದ್ಘಾಟಿಸಿದರು. ಅಣ್ಣಯ್ಯ ಶೆಟ್ಟಿ, ಜೆ.ಎಸ್.ನಾಗರಾಜ್,ಮಾಕೋಡು ಜವರಪ್ಪ,ಕಗ್ಗುಂಡಿ ಹರೀಶ್, ಅಣ್ಣೇಗೌಡ, ಲೊಕೇಶ್ ರಾಜೇ ಅರಸ್ ಇತರರು ಇದ್ದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 66ನೇ ಹುಟ್ಟುಹಬ್ಬದ ಅಂಗವಾಗಿ ಪಿರಿಯಾಪಟ್ಟಣ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ.ಮಹದೇವ್ ಉದ್ಘಾಟಿಸಿದರು. ಅಣ್ಣಯ್ಯ ಶೆಟ್ಟಿ, ಜೆ.ಎಸ್.ನಾಗರಾಜ್,ಮಾಕೋಡು ಜವರಪ್ಪ,ಕಗ್ಗುಂಡಿ ಹರೀಶ್, ಅಣ್ಣೇಗೌಡ, ಲೊಕೇಶ್ ರಾಜೇ ಅರಸ್ ಇತರರು ಇದ್ದರು.
Published on
ಪಿರಿಯಾಪಟ್ಟಣ: ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ 2028ಕ್ಕೆ ಅಧಿಕಾರಕ್ಕೆ ಬರಲಿದ್ದು, ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾಜಿ ಶಾಸಕ ಕೆ.ಮಹದೇವ್ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 66ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಜನಪರ ಆಡಳಿತ ನೀಡುವ ಮೂಲಕ ಬಡವರಿಗೆ, ದೀನದಲಿತರಿಗೆ, ಕಾರ್ಮಿಕ ವರ್ಗಕ್ಕೆ ಸುಭದ್ರತೆಯನ್ನು ಕಲ್ಪಿಸಿದ್ದರು. ಸಾರಾಯಿ ಮತ್ತು ಲಾಟರಿ ನಿಷೇಧಿಸಿ ಮಹಿಳೆಯರಿಗೆ ನೆಮ್ಮದಿ ಕಲ್ಪಿಸಿದ್ದರು. ತಮ್ಮ ಜನಪ್ರಿಯ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳಲ್ಲಿ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡಿ ಅಲ್ಲಿರುವ ಕುಂದುಕೊರತೆಗಳನ್ನು ಖುದ್ದಾಗಿ ತಿಳಿಯುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದರು. 2018ರಲ್ಲಿ ಕಾಂಗ್ರೆಸ್ ಜತೆ ಮೈತ್ರಿಯಾಗದೆ, ಬಿಜೆಪಿಯೊಂದಿಗೆ ಮೈತ್ರಿಯಾಗಿ ಸರ್ಕಾರ ರಚನೆ ಮಾಡಿದ್ದರೆ ಮತ್ತಷ್ಟು ಉತ್ತಮವಾದ ಆಡಳಿತವನ್ನು ನೀಡಬಹುದಿತ್ತು. ಆದರೆ ಕಾಂಗ್ರೆಸ್ ಕುತಂತ್ರದಿಂದಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದರು.
ಕಾಂಗ್ರೆಸ್ ಸರ್ಕಾರವು ಹಲವಾರು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಪ್ರತಿ ಕುಟುಂಬಕ್ಕೆ 20 ಸಾವಿರ ರೂ. ವೆಚ್ಚ ಮಾಡುತ್ತಿರುವ ಕಾಂಗ್ರೆಸ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ರೈತರಿಗೆ ಕಂಟಕಪ್ರಾಯವಾಗಿದೆ. ಅನಾರೋಗ್ಯಕ್ಕೆ ಈಡಾಗಿದ್ದ ಎಚ್‌ಡಿಕೆ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಗುಣಮುಖರಾಗಿದ್ದು, ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಜೆಡಿಎಸ್ ಕಾರ್ಯಕರ್ತರು ಸಂಭ್ರಮದಿಂದ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಜೆಡಿಎಸ್ ಕಾನೂನು ಸಲಹೆಗಾರ ವಕೀಲ ಜೆ.ಎಸ್.ನಾಗರಾಜ್, ಮುಖಂಡರಾದ ಮಾಕೋಡು ಜವರಪ್ಪ, ಎಚ್.ಡಿ.ರಾಜೇಂದ್ರ, ಗಗನ್ ಗೌಡ, ಕಗ್ಗುಂಡಿ ಹರೀಶ್, ಅಣ್ಣೇಗೌಡ, ಲೊಕೇಶ್ ರಾಜೇ ಅರಸ್, ಅತ್ತಹರ್ ಮತಿನ್, ಮಂಜುನಾಥ್ ಸಿಂಗ್, ಪಿ.ಸಿ.ಕೃಷ್ಣ, ಪಿ.ಎನ್.ವಿನೋದ್, ನಿರಂಜನ್, ಎ.ಆರ್.ನವೀನ್, ತಿಮ್ಮನಾಯಕ ರಾಜೇಶ್ ಅರಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net