ಎಚ್.ಡಿ. ಕೋಟೆ:ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಜೆಸಿಬಿ ಹಾಗೂ ಹಿಟಾಚಿ ಬಾಡಿಗೆಯನ್ನು ಹೆಚ್ಚು ಮಾಡಲಾಗಿದೆ ಎಂದು ಎಚ್.ಡಿ. ಕೋಟೆ ಕಪಿಲಾ ಜೆಸಿಬಿ ಮತ್ತು ಹಿಟಾಚಿ ಮಾಲೀಕರ ಸಂಘದ ಅಧ್ಯಕ್ಷ ವೈ.ಎಲ್. ನವೀನ್ ಕುಮಾರ್ ಹೇಳಿದರು.
ಪಟ್ಟಣದ ಪತ್ರಕರ್ತರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲ್ಲಿ ಯುದ್ಧದ ಪರಿಣಾಮ ಡೀಸೆಲ್ ಹಾಗೂ ಆಯಿಲ್ ಸೇರಿದಂತೆ ಜೆಸಿಜಿ ಬಿಡಿಭಾಗಗಳ ಬೆಲೆ ಹೆಚ್ಚಾದ ಕಾರಣ ಈ ಹಿಂದೆ ಜೆಸಿಬಿ ಬಾಡಿಗೆಯು ಗಂಟೆಗೆ 1000 ರೂ., ನಿಗದಿಯಾಗಿತ್ತು. ಇನ್ನು ಮುಂದೆ ಗಂಟೆಗೆ 1200 ರೂ., ಏರಿಸಲಾಗಿದೆ. ಅದೇ ರೀತಿ ಕಡಿಮೆ ಅವಧಿಗೆ ಅಂದರೆ ಕೇವಲ ಒಂದೆರಡು ಗಂಟೆಯೊಳಗೆ ಬಾಡಿಗೆ ಇದ್ದಲ್ಲಿ 2500 ರೂ ನಿಗಧಿ ಮಾಡಲಾಗಿದೆ ಎಂದರು.
ಉಪಾಧ್ಯಕ್ಷ ಪಿ. ರಾಜೇಂದ್ರ ಮಾತನಾಡಿ, ಎಚ್.ಡಿ.ಕೋಟೆ ಮತ್ತು ಸರಗುರು ತಾಲೂಕಿನಾದ್ಯಂತ 80 ಕ್ಕೂ ಹೆಚ್ಚು ಜೆಸಿಬಿ ಹಾಗೂ ಹಿಟಾಚಿಗಳಿದ್ದು ಎಲ್ಲ ಮಾಲೀಕರು ಈ ಬೆಲೆಗೆ ಸಹಕಾರ ನೀಡಬೇಕು. ರೈತರಿಗೆ ಅನುಕುಲವಾಗುವ ರೀತಿಯಲ್ಲೇ ಬೆಲೆ ಏರಿಸಲಾಗಿದೆ ಎಂದರು.
ಎಚ್.ಡಿ. ಕೋಟೆ ಕಪಿಲಾ ಜೆಸಿಬಿ ಮತ್ತು ಹಿಟಾಚಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ನಾಗೇಶ್, , ಗೌರವಾಧ್ಯಕ್ಷ ತಂಗವೇಲು, ಖಜಾಂಚಿಸತೀಶ್ ಕುಮಾರ್, ಸಹ ಕಾರ್ಯದರ್ಶಿ ಕೇಶವೇಗೌಡ, ಪದಾಧಿಕಾರಿಗಳಾದ ಮುರುಳಿದಾಸ್, ಸುಬ್ರಹ್ಮಣ್ಯ, ಸಂತೋಷ್ ಇದ್ದರು.