ಜಯದೇವ್ ಸಮರ್ಪಣೆ ಜೀವನದ ಸಾಧಕ: ಸು.ರಾಮಣ್ಣ ಬಣ್ಣನೆ

ನಗರದ ಮಾಧವ ಕೃಪಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈ.ಚ.ಜಯದೇವ ಬದುಕು-ನೆನಪು ಕುರಿತ ‘ಅವಿಶ್ರಾಂತ ಧ್ಯೇಯಜೀವಿ’ ಪುಸ್ತಕ ಬಿಡುಗಡೆಗೊಂಡಿತು. ಸು.ರಾಮಣ್ಣ. ಜಗನ್ನಾಥ್ ಶೆಣೈ, ಡಾ.ರಂಗನಾಥ್ ಇದ್ದರು.
ನಗರದ ಮಾಧವ ಕೃಪಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈ.ಚ.ಜಯದೇವ ಬದುಕು-ನೆನಪು ಕುರಿತ ‘ಅವಿಶ್ರಾಂತ ಧ್ಯೇಯಜೀವಿ’ ಪುಸ್ತಕ ಬಿಡುಗಡೆಗೊಂಡಿತು. ಸು.ರಾಮಣ್ಣ. ಜಗನ್ನಾಥ್ ಶೆಣೈ, ಡಾ.ರಂಗನಾಥ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮರ್ಪಣೆಯಲ್ಲಿ ಜೀವನದ ಸಾರ್ಥಕತೆಯನ್ನು ಕಂಡುಕೊಂಡ ಒಬ್ಬ ಸಾಧಕ
  • ಸಂಘಕ್ಕೆ ನಾನು ಅನಿವಾರ್ಯ ಅಲ್ಲ, ನನಗೆ ಸಂಘ ಅನಿವಾರ್ಯ ಎನ್ನುವ ತತ್ವ ಅವರಲ್ಲಿತ್ತು
ಮೈಸೂರು:ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್) ಕಟ್ಟಾಳುವಾಗಿದ್ದ ಮೈ.ಚ.ಜಯದೇವ್ ಅವರು ಸಮರ್ಪಣೆಯಲ್ಲಿ ಜೀವನದ ಸಾರ್ಥಕತೆ ಕಂಡುಕೊಂಡ ಸಾಧಕ ಎಂದು ಆರ್‌ಎಸ್‌ಎಸ್ ಜೇಷ್ಠ ಪ್ರಚಾರಕ ಸು.ರಾಮಣ್ಣ ಬಣ್ಣಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮೈಸೂರು ಘಟಕ, ರಾಷ್ಟ್ರೋತ್ಥಾನ ಸಾಹಿತ್ಯ, ವನವಾಸಿ ಕಲ್ಯಾಣ ಹಾಗೂ ಮಂಥನ ಮೈಸೂರು ಸಹಯೋಗದಲ್ಲಿ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಮಾಧವ ಕೃಪಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈ.ಚ.ಜಯದೇವ ಬದುಕು-ನೆನಪು ಕುರಿತ ‘ಅವಿಶ್ರಾಂತ ಧ್ಯೇಯಜೀವಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸದಾ ಸಂಘಂ ಶರಣಂ ಗಚ್ಛಾಮಿ, ಧರ್ಮ ಶರಣಂ ಗಚ್ಛಾಮಿ ಎನ್ನುವ ಬಾಳಸೂತ್ರ ಅಳವಡಿಸಿಕೊಂಡಿದ್ದ ಅವರು, ಸಂಘಕ್ಕೆ ನಾನು ಅನಿವಾರ್ಯ ಅಲ್ಲ, ನನಗೆ ಸಂಘ ಅನಿವಾರ್ಯ ಎನ್ನುವ ತತ್ವ ಅವರಲ್ಲಿತ್ತು. ಇದೇ ಸಮರ್ಪಣೆಯಲ್ಲಿ ಜೀವನದ ಸಾರ್ಥಕತೆಯನ್ನು ಕಂಡುಕೊಂಡ ಒಬ್ಬ ಸಾಧಕ ಎಂದರು.
ಅವರ ಕುರಿತು ಬರೆದಿರುವ ಪುಸ್ತಕ ಒಮ್ಮೆ ಓದಿ ಗೂಡಿಗೆ ಸೇರುವುದಲ್ಲ. ಸಾಧಕನ ಜೀವನದಲ್ಲಿ ಬರಬಹುದಾದ ಅನುಮಾನ, ಸಂದೇಹ, ಭ್ರಮೆ, ನಿರಾಸೆ ಇತ್ಯಾದಿ ನಕಾರತ್ಮಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಪುಸ್ತಕ ಇದಾಗಿದೆ ಎಂದರು.
ಅವಿವಾಹಿತರಾಗಿದ್ದ ಮೈ.ಚ.ಜಯದೇವರು, 4 ದಶಕಗಳ ಕಾಲ ಸಾಮಾಜಿಕ ಜೀವನದಲ್ಲಿ ಸಕ್ರಿಯರಾಗಿದ್ದರು. 1995ರಲ್ಲಿ ಸಂಘದ ಪ್ರಚಾರಕರಾಗಿದ್ದರು. ಬಳಿಕ ಕೇಶವಕೃಪಾವನ್ನು ಕೇಂದ್ರವಾಗಿಸಿಕೊಂಡು ಸ್ವಯಂ ಸೇವಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. 2002ರಲ್ಲಿ ಸಹ ಕ್ಷೇತ್ರಿಯ ಪ್ರಚಾರಕ, 2004ರಲ್ಲಿ ಕ್ಷೇತ್ರಿಯ ಪ್ರಚಾರಕರಾಗಿ, 2009ರಲಿ ಅಖಿಲ ಭಾರತೀಯ ಕಾರ್ಯಚರಣಿ ಸದಸ್ಯರಾಗಿದ್ದರು. 2015ರಿಂದ ಹಿರಿಯ ಪ್ರಚಾರಕರಾಗಿ ಸಂಘಟನೆಯ ಮಾರ್ಗದರ್ಶನ ಮಾಡಿದ್ದ ಸಂದರ್ಭವನ್ನು ನೆನೆದರು.
1965ರಲ್ಲಿ ರಾಷ್ಟ್ರೋತ್ಥಾನ ಪರಿಷತ್ , ವನವಾಸಿ ಕಲ್ಯಾಣ ಸ್ಥಾಪನೆ ವೇಳೆ ಪ್ರಮುಖ ಪಾತ್ರವಹಿಸಿದ್ದ ಅವರು, ಸಮಗ್ರ ವಿಕಾಸದ ಎಲ್ಲ ಹಂತಗಳಲ್ಲಿಯೂ ಮಾರ್ಗದರ್ಶಕರಾಗಿದ್ದರು. ಮೂರು ದಶಕಗಳ ಕಾಲ ಪರಿಷತ್ ನ ಪ್ರಧಾನ ವ್ಯವಸ್ಥಾಪಕರಾಗಿ ಶಿಕ್ಷಣ, ಆರೋಗ್ಯ, ಸಾಹಿತ್ಯ ಮತ್ತು ಸೇವೆಯ ಮೂಲಕ ಪರಿಷತ್ ಬೆಳವಣಿಗೆಯಲ್ಲಿ ಇವರ ಕೊಡುಗೆ ಅಪಾರ ಎಂದರು.
ತುರ್ತು ಪರಿಸ್ಥಿತಿ ವೇಳೆ ಬೆಂಗಳೂರಿನ ಬಸವನಗುಡಿಯ ಮೊದಲ ತಂಡದಲ್ಲಿ ಸತ್ಯಾಗ್ರಹ ನಡೆಸಿ 1975ರ ನವೆಂಬರ್‌ನಲ್ಲಿ ಬಂಧಿತರಾಗಿ ಜೈಲುವಾಸ ಅನುಭವಿಸಿದರು ಎಂದು ಹೇಳಿದರು.
ಉದ್ಯಮಿ ಜಗನ್ನಾಥ್ ಶೆಣೈ ಕೃತಿ ಬಿಡುಗಡೆಗೊಳಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಡಾ.ರಂಗನಾಥ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net