ದೇವತೆಕಟ್ಟೆ ಮಾರಮ್ಮನ ಜಾತ್ರೆ ಸಂಪನ್ನ

ಸರಗೂರು ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಗ್ರಾಮದೇವತೆ   ಶ್ರೀ ಕಟ್ಟೆ ಮಾರಮ್ಮನವರ ಜಾತ್ರಾ ಮಹೋತ್ಸವ, ಅಮ್ಮನವರ ಪಲ್ಲಕ್ಕಿ ಮೆರವಣಿಗೆ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ನೂರಾರು ಭಕ್ತರು ಹಾಜರಿದ್ದರು.
ಸರಗೂರು ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಕಟ್ಟೆ ಮಾರಮ್ಮನವರ ಜಾತ್ರಾ ಮಹೋತ್ಸವ, ಅಮ್ಮನವರ ಪಲ್ಲಕ್ಕಿ ಮೆರವಣಿಗೆ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ನೂರಾರು ಭಕ್ತರು ಹಾಜರಿದ್ದರು.
Published on
ಸರಗೂರು : ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಮಂಗಳವಾರ ಶಕ್ತಿದೇವತೆ ಎನಿಸಿಕೊಂಡಿರುವ ಗ್ರಾಮ ದೇವತೆ ಶ್ರೀ ಕಟ್ಟೆ ಮಾರಮ್ಮನವರ ಜಾತ್ರಾ ಮಹೋತ್ಸವ, ಅಮ್ಮನವರ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಜಾತ್ರಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ಗುಡಿ ಚಪ್ಪರ ಕಟ್ಟಿ, ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ದೇವರ ಗುಡಿಯನ್ನು ಹಸಿರು ತೋರಣದಿಂದ ಮದುವಣ ಗಿತ್ತಿಯಂತೆ ಸಿಂಗಾರ ಮಾಡಲಾಗಿತ್ತು.
ದೇವಿಯ ಉತ್ಸವಮೂರ್ತಿಯ ಮೆರವಣಿಗೆ ನಂತರ ಗುಡಿಯಲ್ಲಿ ಕೂರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಈರುಳ್ಳಿ ಸರವನ್ನು ಹೊತ್ತು ತಂದು ಹರಕೆ ತೀರಿಸಿದರು. ನಂತರ ಮಹಾಮಂಗಳಾರತಿ ಮಾಡಲಾಯಿತು.
ಭಕ್ತರಿಗೆ ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು.
ಗ್ರಾಮದ ಸಿದ್ದಮಲ್ಲೇಶ್ವರ ಪಟ್ಟದ ಮಠದಿಂದ ಅಮ್ಮನವರ ಹೂವಿನ ಅಲಂಕಾರದ ಪಲ್ಲಕ್ಕಿ ಉತ್ಸವವನ್ನು ಬಸವದೊಂದಿಗೆ ಮೆರವಣಿಗೆ ನಡೆಸಲಾಯಿತು. ನಂದಿ ಧ್ವಜ, ವೀರಗಾಸೆ ನೃತ್ಯ, ಸತ್ತಿಗೆ, ಮಂಗಳವಾದ್ಯ, ನಗಾರಿ, ಬಾಣ ಬಿರುಸು ಇನ್ನಿತರ ಜಾನಪದ ಕಲಾಪ್ರಕಾರಗಳು ಮೆರವಣಿಗೆಗೆ ಮೆರಗು ನೀಡಿದವು. ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಕಿರಿಯ ಶ್ರೀ ತೋಂಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಂಚೀಪುರ, ಸಿದ್ದಾಪುರ ಮತ್ತಿತರ ಗ್ರಾಮಸ್ಥರು ಪೂಜೆ ಮತ್ತು ಉತ್ಸವದಲ್ಲಿ ಭಾಗವಹಿಸಿ ಧನ್ಯತೆ ಮೆರೆದರು.
ಪೋಟೋ ಕ್ಯಾಪ್ಸನ್..
17 ಎಸ್ ಆರ್ ಜಿ 2.3
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net