ನಗರದ ಚಾಮುಂಡಿಪುರಂ ವೃತ್ತದಲ್ಲಿ ಎಸ್.ಜಾನಕಿ ಅವರ ಭಾವಚಿತ್ರದ ಎದುರು ಮೇಣದಬತ್ತಿ ಹಚ್ಚಿ ಸಂತಾಪ ಸಲ್ಲಿಸಲಾಯಿತು. ಸಿ.ನಾರಾಯಣಗೌಡ, ಡಿ.ಟಿ.ಪ್ರಕಾಶ್, ಮ.ವಿ.ರಾಮಪ್ರಸಾದ್, ಎಂ.ಡಿ.ಪಾರ್ಥಸಾರಥಿ, ಜಗದೀಶ್, ಮುಖಂಡರಾದ ಜಿ ರಾಘವೇಂದ್ರ ,ವಿಕ್ರಮ್ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೋಟ್ಯಂತರ ಸಂಗೀತದ ಅಭಿಮಾನಿಗಳನ್ನು ಜಾನಕಿ ತಮ್ಮ ಬದುಕಿನುದ್ದಕ್ಕೂ ರಂಜಿಸಿರುವುದು ಮಹತ್ತರ ಸಾಧನೆ
ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ಜಾನಕಿ ನೆಲೆಸಿದ್ದಾರೆ
ಮೈಸೂರು:ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹೇಳಿದರು.
ಗಾನ ಕೋಗಿಲೆ ಎಸ್.ಜಾನಕಿ ಅವರಿಗೆ ಸಂತಾಪ ಸಲ್ಲಿಸಲು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್, ಪಾತಿ ಫೌಂಡೇಷನ್, ಪ್ರಜ್ಞಾವಂತ ನಾಗರಿಕ ವೇದಿಕೆ, ಅಪೂರ್ವ ಸ್ನೇಹ ಬಳಗದಿಂದ ನಗರದ ಚಾಮುಂಡಿಪುರಂ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿರು.
ಭಾರತೀಯ ಚಿತ್ರ ರಂಗದ 20ಕ್ಕೂ ಹೆಚ್ಚು ಭಾಷೆ ಅಲ್ಲದೆ ವಿದೇಶಿ ಭಾಷೆಗಳಲ್ಲಿ ಹಾಡುವ ಮೂಲಕ ಕೋಟ್ಯಂತರ ಸಂಗೀತದ ಅಭಿಮಾನಿಗಳನ್ನು ಜಾನಕಿ ತಮ್ಮ ಬದುಕಿನುದ್ದಕ್ಕೂ ರಂಜಿಸಿರುವುದು ಮಹತ್ತರ ಸಾಧನೆ ಎಂದರು.
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ನೆರೆಯ ಆಂಧ್ರದಲ್ಲಿ ಜನಿಸಿದರೂ ಕನ್ನಡದಲ್ಲಿ ಹಾಡುವ ಮೂಲಕ ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ಜಾನಕಿ ನೆಲೆಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
ನಗರಪಾಲಿಕೆ ಮಾಜಿ ಸದಸ್ಯರಾದ ಮ.ವಿ.ರಾಮಪ್ರಸಾದ್, ಎಂ.ಡಿ.ಪಾರ್ಥಸಾರಥಿ, ಜಗದೀಶ್, ಮುಖಂಡರಾದ ಜಿ ರಾಘವೇಂದ್ರ , ವಿಕ್ರಮ್ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ, ಕಡಕೊಳ ಜಗದೀಶ್, ಅರವಿಂದ, ಚಕ್ರಪಾಣಿ, ಸುಚೇಂದ್ರ, ಯಶ್ವಂತ್, ಶಿವಲಿಂಗ ಸ್ವಾಮಿ, ಮಹದೇವ್, ರಾಮು ಇತರರು ಇದ್ದರು.