ಸದಸ್ಯ ಜೆ.ಕೆ.ತಿಮ್ಮ ಮಾತನಾಡಿ, ನಾಗರಹೊಳೆ ಉದ್ಯಾನವನದಲ್ಲಿ ಜೇನು ಕುರುಬ ಸಮುದಾಯ ವಿಶೇಷವಾಗಿ ಅತಿ ದುರ್ಬಲ ಜನಾಂಗೀಯ ಗುಂಪು(ಪಿವಿಟಿಜಿ) ಎಂದು ಮಾನ್ಯತೆ ಪಡೆದಿದ್ದು, ಸಮುದಾಯದ ವಾಸಸ್ಥಳ ಮತ್ತು ಆವಾಸಸ್ಥಾನದ ಹಕ್ಕುಗಳನ್ನು ಹೊಂದಿದೆ. ತಮ್ಮ ಪಾರಂಪರಿಕ ವಾಸ ಸ್ಥಳಗಳಲ್ಲಿ ವಾಸಿಸುವ, ಪ್ರವೇಶಿಸುವ, ಬಳಸುವ ಮತ್ತು ರಕ್ಷಿಸುವ ಹಕ್ಕುಗಳನ್ನು ಹೊಂದಿದ್ದೇವೆ. ಆದರೆ, ಅಧಿಕಾರಿಗಳ ವರ್ತನೆ ಹಿಂಸೆ ಮತ್ತು ದೌರ್ಜನ್ಯವಲ್ಲದೇ ಮತ್ತೇನೂ ಅಲ್ಲ. ಅರಣ್ಯ ಇಲಾಖೆಯ ಈ ವಸಾಹತುಶಾಹಿ ಸಂರಕ್ಷಣೆ ನೀತಿಯನ್ನು ಸಮಿತಿ ಖಂಡಿಸುತ್ತದೆ. ನಮ್ಮ ಪಾರಂಪರಿಕ ವಾಸ ಸ್ಥಗಳಲ್ಲಿ ಸಭೆಗಳು, ಕೂಟಗಳು, ಮತ್ತು ಪವಿತ್ರ ಆಚರಣೆಗಳನ್ನು ನಡೆಸುವ ಸಂಪೂರ್ಣ ಹಕ್ಕು ನಮಗಿದೆ. ಸಂವಾದ ಕಾರ್ಯಕ್ರಮದ ನಾಗರಹೊಳೆ ಘೋಷಣೆಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.