ಸಾ.ರಾ. ಬೆಂಬಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ

ಕೆ.ಆರ್.ನಗರ ತಾಲೂಕಿನ ಬೋರೇಕಲ್ಲಹಳ್ಳಿ ಬಸವ ಮಠದ ಭವನವನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಉದ್ಘಾಟಿಸಿದರು. ಮಾಜಿ ಸಚಿವ ಸಾ.ರಾ.ಮಹೇಶ್, ಬಸವ ಮಠದ ಶ್ರೀ ದೇವರಾಜ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಅಶ್ವಿನ್‌ಕುಮಾರ್, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಇನ್ನಿತರರು ಇದ್ದರು.

Published on
ಕೆ.ಆರ್.ನಗರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೀವು ಸಾ.ರಾ.ಮಹೇಶ್ ಅವರಿಗೆ ಆಶೀರ್ವದಿಸಿ ಗೆಲ್ಲಿಸುವ ಮೂಲಕ ಉತ್ತಮ ಜನಪ್ರತಿನಿಧಿಯನ್ನು ಸಮಾಜಕ್ಕೆ ಕೊಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಬೋರೇಕಲ್ಲಹಳ್ಳಿ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬಸವ ಮಠದ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, 2028-19ರಲ್ಲಿ ಬೋರೇಕಲ್ಲಹಳ್ಳಿ ಸೇರಿದಂತೆ ಈ ಭಾಗದ ಐದು ಗ್ರಾಮಗಳ ಶಿವಭಕ್ತರಿಗೆ ಭವನ ಕಟ್ಟಲು ಅನುದಾನ ನೀಡಿದ್ದೆ. ಬಹಳ ಸುಸಜ್ಜಿತವಾಗಿ ಕಟ್ಟಿದ್ದಾರೆ. ಭವನ ಎಲ್ಲರಿಗೂ ಸದ್ಬಳಕೆಯಾಗಲಿ ಎಂದರು.
ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಮಾದರಿಯಾಗಿದ್ದರು. ಇವರ ಸೇವೆ ರಾಜ್ಯಕ್ಕೆ ಅವಶ್ಯಕತೆ ಇದೆ. ಶಾಲಾ ಕಟ್ಟಡ, ದೇವಸ್ಥಾನ, ಸಮುದಾಯ ಭವನ ಸೇರಿದಂತೆ ಅನೇಕ ಕಟ್ಟಡಗಳ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿ ಉದ್ಘಾಟನೆ ಮಾಡಿದ ರಾಜ್ಯದ ಏಕೈಕ ಶಾಸಕ ಸಾ.ರಾ.ಮಹೇಶ್ ಎಂದು ಕೊಂಡಾಡಿದರು.
ಕಲುಷಿತ ಸಮಾಜವನ್ನು ಸರಿಪಡಿಸಲು ಬಸವ ಮಠದ ಭವನ ಸುತ್ತಮುತ್ತಲಿನ ಹಳ್ಳಿಗಳ ಶಿವ ಭಕ್ತರು ಸದುಪಯೋಗ ಪಡಿಸಿಕೊಂಡು ಆಧ್ಯಾತ್ಮಿಕವಾಗಿ ಉತ್ತಮ ಸಮಾಜ ಕಟ್ಟುವ ಕೆಲಸವಾಗಲಿ ಎಂದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿದರು. ಬಸವ ಮಠದ ಶ್ರೀ ದೇವರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಅಶ್ವಿನ್‌ಕುಮಾರ್, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ವೀರಶೈವ ಮುಖಂಡರಾದ ಬೋರೇಕಲ್ಲಹಳ್ಳಿ ಗ್ರಾಮದ ಅಶೋಕ್, ಎಚ್.ಟಿ.ಕುಮಾರ್, ಸತೀಶ್, ಮಲ್ಲಿಕಾರ್ಜುನ, ಬಾಲಾಜಿ ಗಣೇಶ್, ಜೈಕುಮಾರ್, ಸುರೇಶ್, ಕೆಂಡಗಣ್ಣ, ಸೇರಿದಂತೆ ಇನ್ನಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net