ಪ್ರಕೃತಿ ಧರ್ಮಕ್ಕೆ ಮರಳುವುದು ಅಗತ್ಯ

 ಹುಣಸೂರು ತಾಲೂಕು ಕಪ್ಪನಕಟ್ಟೆ ಹಾಡಿಯಲ್ಲಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿ ಸಮಾರಂಭದಲ್ಲಿ ರಾವಂದೂರು ಮಠದ ಶ್ರೀ ಮೋಕ್ಷಪತಿ ಸ್ವಾಮಿಗಳು ಆಶೀರ್ವಚನ ನೀಡಿದರು. ಬಿರ್ಸಾ ಮುಂಡಾ ಯುವಕರ ಬಳಗದ ವಿಜಯ್, ಗಗನ್, ಪಾರ್ಥ ಇತರರಿದ್ದರು.
ಹುಣಸೂರು ತಾಲೂಕು ಕಪ್ಪನಕಟ್ಟೆ ಹಾಡಿಯಲ್ಲಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿ ಸಮಾರಂಭದಲ್ಲಿ ರಾವಂದೂರು ಮಠದ ಶ್ರೀ ಮೋಕ್ಷಪತಿ ಸ್ವಾಮಿಗಳು ಆಶೀರ್ವಚನ ನೀಡಿದರು. ಬಿರ್ಸಾ ಮುಂಡಾ ಯುವಕರ ಬಳಗದ ವಿಜಯ್, ಗಗನ್, ಪಾರ್ಥ ಇತರರಿದ್ದರು.
Published on
ಹುಣಸೂರು: ಮತಾಂತರಗೊಂಡಿರುವ ಆದಿವಾಸಿಗಳು ತಮ್ಮ ಪ್ರಕೃತಿ ಧರ್ಮಕ್ಕೆ ಮತ್ತೆ ಮರಳುವುದು ಅಗತ್ಯ ಎಂದು ರಾವಂದೂರ ಮಠದ ಶ್ರೀ ಮೋಕ್ಷಪತಿ ಸ್ವಾಮಿ ಸಲಹೆ ನೀಡಿದರು.
ತಾಲೂಕಿನ ಕಪ್ಪನಕಟ್ಟೆ ಹಾಡಿಯಲ್ಲಿ ಭಗವಾನ್ ಬಿರ್ಸಾಮುಂಡಾರ 150ನೇ ಜಯಂತಿ ಅಂಗವಾಗಿ ವನವಾಸಿ ಕಲ್ಯಾಣಸಂಸ್ಥೆ ಮತ್ತು ಕಪ್ಪನಕಟ್ಟೆ ಹಾಡಿಯ ಬಿರ್ಸಾಮುಂಡಾ ಯುವಕರ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. 
ಬಿರ್ಸಾ ಮುಂಡ ಪಾಲಕರು ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದರು. ಆದರೆ ಬಿರ್ಸಾ ಮುಂಡ ಸ್ವಾಭಿಮಾನ ಮತ್ತು ಪ್ರಕೃತಿ ಧರ್ಮದ ಶ್ರೇಷ್ಠತೆ ಅರ್ಥ ಮಾಡಿಕೊಂಡು ತನ್ನ ಮೂಲಧರ್ಮಕ್ಕೆ ಪಾಲಕರನ್ನು ಕರೆ ತಂದು, ತಮ್ಮ ಧರ್ಮದ ಬಗ್ಗೆ ಪ್ರಚಾರ ಕೈಗೊಂಡು ಬ್ರಿಟಿಷರು ಅರಣ್ಯ ಕಬಳಿಸುವ ಕ್ರಮದ ವಿರುದ್ಧ ಸಿಡಿದೆದ್ದರು. ಬ್ರಿಟಿಷ್ ಆಡಳಿತ ಆದಿವಾಸಿಗಳ ಧರ್ಮಬದಲಿಸಿ, ಕಾಡಿನ ಹಕ್ಕು ಕಿತ್ತುಕೊಂಡು ಸ್ವತಂತ್ರ ಮತ್ತು ಸ್ವಾಭಿಮಾನದ ಬದುಕಿಗೆ ಕೊಳ್ಳಿ ಇಟ್ಟರೆಂದು ಪ್ರತಿಭಟಿಸಿ ಬ್ರಿಟಿಷ್ ರಾಣಿ ಆಡಳಿತದ ವಿರುದ್ಧ ಸಮರ ಸಾರಿದರು. ಇಂತಹ ನಾಯಕನ ಪರಂಪರೆಯ ಆದಿವಾಸಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರ ವಾಗುವುದು ಅವಮಾನವಲ್ಲವೇ? ನಿಮ್ಮದೇ ಆದ ಸಂಪದ್ಭರಿತ ಸಂಸ್ಕೃತಿ, ಪರಂಪರೆಯನ್ನು, ನಿಮ್ಮ ಪ್ರಕೃತಿ ಧರ್ಮವನ್ನೇ ನೀವು ಪಾಲಿಸಬೇಕಾದ ಕರ್ತವ್ಯ ನಿಮ್ಮದಿದೆ ಎಂದರು.
ಯುವಕರ ಬಳಗದ ಅಧ್ಯಕ್ಷ ವಿಜಯ್ ಮಾತನಾಡಿ, ಕಪ್ಪನಕಟ್ಟೆ ಹಾಡಿಯಲ್ಲಿ ಸಂಪೂರ್ಣವಾಗಿ ಜೇನುಕುರುಬ ಜನಾಂಗ ವಾಸವಾಗಿದ್ದು ಅವರಲ್ಲಿ ಶೇ.85 ರಷ್ಟು ಕುಟುಂಬಗಳು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದಾರೆ. ಮತಾಂತರವನ್ನು ತಡೆಯುವ ಹಾಗೂ ಮಾತೃ ಧರ್ಮಕ್ಕೆ ಮರಳಿ ಕರೆತರುವ ಉದ್ದೇಶದಿಂದ ಈ ಹಾಡಿಯಲ್ಲಿ ಎರಡ್ಮೂರು ವರ್ಷಕ್ಕೊಮ್ಮೆ ಸಂಸ್ಥೆ ವತಿಯಿಂದ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಾಡಿಸಲಾಗುತ್ತಿದ್ದು ಜೇನುಕುರುಬ ಸಮುದಾಯ ಎಚ್ಚರಗೊಳ್ಳಬೇಕೆಂದು ಕರೆ ನೀಡಿದರು.
ಬಿಜೆಪಿ ಮುಖಂಡೆ ಸವಿತಾ ಚೌಹಣ್  ಬಿರ್ಸಾ ಮುಂಡಾರ ಧೈರ್ಯ, ಶೌರ್ಯ, ಅಪಾರವಾದ ಪರಿಸರ ಜ್ಞಾನ, ದೇಶಭಕ್ತಿ ಮತ್ತು ತನ್ನ ಸಮುದಾಯದ ಬಗ್ಗೆ ಇದ್ದ ಕಾಳಜಿ ಬಗ್ಗೆ ವಿವರಿಸಿದರು. ಬಿರ್ಸಾ ಮುಂಡಾ ಯುವಕರ ಬಳಗದ ಗಣೇಶ್, ಗಗನ್, ಪಾರ್ಥ ಸೇರಿದಂತೆ ಹಾಡಿಯ ಗಿರಿಜನರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net