ನಾಡು-ನುಡಿಗೆ ಹೋರಾಡಿದವರ ಸ್ಮರಣೆ ಅಗತ್ಯ

ನಟರಾಜ ಸಭಾ ಭವನದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಡಾ.ವೈ.ಡಿ.ರಾಜಣ್ಣ, ಯಶಸ್ವಿ ಎಸ್.ಸೋಮಶೇಖರ್, ಜೈಶಂಕರ್, ಡಾ.ಎಂ.ಪುಟ್ಟಸ್ವಾಮಿ, ಯಶವಂತ್ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಎಸ್.ಶಿವರಾಜಪ್ಪ, ಡಾ.ವೈ.ಡಿ.ರಾಜಣ್ಣ ಇದ್ದರು.
ನಟರಾಜ ಸಭಾ ಭವನದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಡಾ.ವೈ.ಡಿ.ರಾಜಣ್ಣ, ಯಶಸ್ವಿ ಎಸ್.ಸೋಮಶೇಖರ್, ಜೈಶಂಕರ್, ಡಾ.ಎಂ.ಪುಟ್ಟಸ್ವಾಮಿ, ಯಶವಂತ್ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಎಸ್.ಶಿವರಾಜಪ್ಪ, ಡಾ.ವೈ.ಡಿ.ರಾಜಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯ
ಮೈಸೂರು: ಕನ್ನಡ ನಾಡಿಗೆ ತನ್ನದೇ ಆದ ಹಿರಿಮೆಯಿದೆ. ಕನ್ನಡ ನಾಡಿನ ಉಳಿವಿಗೆ ಹೋರಾಡಿದವರನ್ನು ನೆನೆಯುವುದೇ ಕನ್ನಡ ರಾಜ್ಯೋತ್ಸವ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ನಗರದ ನಟರಾಜ ಸಭಾ ಭವನದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಶುಕ್ರವಾರ ಏರ್ಪಡಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡದ ಹಲವು ಮಹನೀಯರ ಆದರ್ಶಗಳನ್ನು ಕನ್ನಡಿಗರು ಅಳವಡಿಸಿಕೊಳ್ಳಬೇಕು. ಆ ಮೂಲಕ ನಾಡು-ನುಡಿ, ಜಲ, ಕನ್ನಡಿಗರ ರಕ್ಷಣೆ ಮಾಡುವಂತಹ ಗುರಿಯನ್ನು ನಾವೆಲ್ಲರೂ ಸ್ವೀಕಾರ ಮಾಡಬೇಕಿದೆ ಎಂದರು.
2500 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಪ್ರಾಚೀನ ಭಾಷೆ ಕನ್ನಡ. ಪಂಪ, ಜನ್ನ, ರನ್ನರಿಂದ ಹಿಡಿದು, ಬೇಂದ್ರೆ, ಕುವೆಂಪು ಅವರವರೆಗೂ ಸಾವಿರಾರು ಸಾಹಿತಿಗಳು, ಹೋರಾಟಗಾರರು ಕನ್ನಡಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಪಂಚದಲ್ಲಿ ಯಾವ ಭಾಷೆಗೂ ಇಲ್ಲದ ಶಕ್ತಿ ಕನ್ನಡಕ್ಕಿದೆ. ಕನ್ನಡಿಗರು ಯಾವಾಗಲೂ ವಿಶಾಲ ಹೃದಯವಂತರು. ಹೊರಗಿನವರು ಯಾರೇ ಬಂದರೂ ಮೊದಲು ಪ್ರೀತಿ, ವಿಶ್ವಾಸ ನೀಡುವ ಮನೋಭಾವ ನಮ್ಮಲ್ಲಿದೆ. ಅವರಿಗೆ ಬೇಕಾದ ಎಲ್ಲ ಸೌಲಭ್ಯ ಒದಗಿಸುತ್ತೇವೆ. ಆದರೆ, ಕನ್ನಡಿಗರು ಹೊರ ರಾಜ್ಯಗಳಿಗೆ ಹೋದ ಸಂದರ್ಭದಲ್ಲಿ ನಮ್ಮನ್ನು ಕೀಳಾಗಿ ಕಾಣುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಟರಾಜ ಶಿಕ್ಷಣ ಸಂಸ್ಥೆಗಳ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಹೋರಾಟಗಾರರು ಇಲ್ಲವಾಗಿದ್ದರೆ, ಇಂದು ಕರ್ನಾಟಕದಲ್ಲಿ ನಾಡು, ನುಡಿಗೆ ಕುತ್ತು ಬರುತ್ತಿತ್ತು. ಹೋರಾಟಗಳು ನಡೆದರೂ ಸಹ ಇವತ್ತು ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಹೆಚ್ಚು ಮನ್ನಣೆ ದೊರಕದಂತಾಗಿರುವುದು ವಿಷಾದನೀಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಸಮಾಜ ಸೇವಕರಾದ ಯಶಸ್ವಿ ಎಸ್.ಸೋಮಶೇಖರ್, ಜೈಶಂಕರ್, ಡಾ.ಎಂ.ಪುಟ್ಟಸ್ವಾಮಿ, ಯಶವಂತ್ ಅವರನ್ನು ಸನ್ಮಾನಿಸಲಾಯಿತು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹಿರಿಯ ಗಾಯಕ ಗೋಪಿ, ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net