ಲಾಡ್ಜ್‌ಗೆ ಬರುವವರ ಮಾಹಿತಿ ಪಡೆಯುವುದು ಕಡ್ಡಾಯ

ಹುಣಸೂರು ನಗರಠಾಣೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಇನ್‌ಸ್ಪೆೆಕ್ಟರ್ ತೋಷ್ ಕಶ್ಯಪ್ ಮಾತನಾಡಿದರು. ಪಿಎಸ್‌ಐ ತಾಜುದ್ದೀನ್ ಇದ್ದಾರೆ.
ಹುಣಸೂರು ನಗರಠಾಣೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಇನ್‌ಸ್ಪೆೆಕ್ಟರ್ ತೋಷ್ ಕಶ್ಯಪ್ ಮಾತನಾಡಿದರು. ಪಿಎಸ್‌ಐ ತಾಜುದ್ದೀನ್ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ಸೂಚನೆ
ಹುಣಸೂರು: ಹುಣಸೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಲಾಡ್ಜ್‌ಗಳಲ್ಲಿ ತಂಗಲು ಬರುವ ಪ್ರತಿಯೊಬ್ಬರ ಗುರುತಿನ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಪೂರ್ಣ ಮಾಹಿತಿ ಪಡೆದುಕೊಳ್ಳಬೇಕೆಂದು ಇನ್ ಸ್ಪೆಕ್ಟರ್ ಸಂತೋಷ್ ಕಶ್ಯಪ್ ಸೂಚಿಸಿದರು.
ತಾಲೂಕಿನ ದಾಸನಪುರ ಗ್ರಾಮದಲ್ಲಿ ಶುಕ್ರವಾರ ರಾಜ್ಯವೇ ಬೆಚ್ಚಿಬೀಳಿಸಿದ ಅಕ್ರಮ ಡ್ರಗ್ಸ್ ಜಾಲ ಪತ್ತೆಯಾದ ಹಿನ್ನೆಲೆಯಲ್ಲಿ ಭಾನುವಾರ ಠಾಣೆಯಲ್ಲಿ
ನಗರವ್ಯಾಪ್ತಿಯ ಲಾಡ್ಜ್‌ಗಳ ನಿರ್ವಹಿಸುವವರ ಸಭೆ ಆಯೋಜಿಸಿ ಮಾತನಾಡಿದ ಅವರು, ಹೊರರಾಜ್ಯಗಳಿಂದ ಬಂದವರ ಪೂರ್ಣ ಮಾಹಿತಿ ಕಡ್ಡಾಯವಾಗಿ ಪಡೆಯಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೆ ಮಾಹಿತಿನೀಡಿ. ಲಾಡ್ಜ್‌ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರ ಅಳವಡಿಸಿರಬೇಕು ಹಾಗು 30 ದಿನ ಬ್ಯಾಕ್ ಅಪ್ ಇರಬೇಕು ಎಂದು ಸೂಚಿಸಿದರು.
ಪಿಎಸ್‌ಐ ಟಿ. ಎಂ.ತಾಜುದ್ದೀನ್ ಮಾತನಾಡಿ, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಠಾಣಾ ವಾಟ್ಸ್ ಅಪ್ ಗ್ರೂಪ್‌ಗಳಲ್ಲಿ ಮಾಹಿತಿ ನೀಡಿ ಅವರು ನೀಡುವ ಮೊಬೈಲ್ ಸಂಖ್ಯೆಗಳಿಗೆ ಕಾಲ್ ಮಾಡಿ ಖಚಿತಪಡಿಸಿಕೊಳ್ಳಬೇಕೆಂದು ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net