ಆತ್ಮವಿಶ್ವಾಸವಿದ್ದಲ್ಲಿ ಪರೀಕ್ಷೆ ಎದುರಿಸುವುದು ಸುಲಭ

ಹೂಟಗಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಡ್ಡೀಕೆರೆ ಗೋಪಾಲ್  ಉದ್ಘಾಟಿಸಿದರು. ಎಂ.ಪ್ರಕಾಶ್, ನಾಗರಾಜ ವಿ.ಬೈರಿ, ಸಾಲಿಗ್ರಾಮ ಗಣೇಶ್ ಶೆಣೈ, ಅಂಶಿ ಪ್ರಸನ್ನಕುಮಾರ್, ನ.ಗಂಗಾಧರಪ್ಪ ಜ್ಯೋತಿ ಗಣೇಶ್ ಇದ್ದರು.
ಹೂಟಗಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಡ್ಡೀಕೆರೆ ಗೋಪಾಲ್ ಉದ್ಘಾಟಿಸಿದರು. ಎಂ.ಪ್ರಕಾಶ್, ನಾಗರಾಜ ವಿ.ಬೈರಿ, ಸಾಲಿಗ್ರಾಮ ಗಣೇಶ್ ಶೆಣೈ, ಅಂಶಿ ಪ್ರಸನ್ನಕುಮಾರ್, ನ.ಗಂಗಾಧರಪ್ಪ ಜ್ಯೋತಿ ಗಣೇಶ್ ಇದ್ದರು.
Published on
ಮೈಸೂರು: ಆತ್ಮವಿಶ್ವಾಸ ಇದ್ದಲ್ಲಿ ಪರೀಕ್ಷೆ ಎದುರಿಸುವುದು ಸುಲಭ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ ಹೇಳಿದರು.
ಹೂಟಗಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ದಾವಣೆಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಮೈಸೂರು ಶಾಖೆ ಉದ್ಘಾಟನೆ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಭಾವಿ ತಯಾರಿ ಉಚಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರಗಳ ಲಾಭ ಪಡೆದು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಬೇಕು ಎಂದರು.
ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ವಿದ್ಯಾರ್ಥಿಗಳಿಗೆ ಏಕಾಗ್ರತೆ ಮುಖ್ಯ. ಏಕಾಗ್ರತೆಯಿಂದ ಕಲಿತಲ್ಲಿ ಯಾವುದೇ ಪರೀಕ್ಷೆಯನ್ನು ಚೆನ್ನಾಗಿ ಬರೆಯಬಹುದು ಎಂದರು. ಗೂಗಲ್ ಸಿಇಒ ಸುಂದರ್ ಪಿಚೈ ರೀತಿಯಲ್ಲಿ ನೀವೆಲ್ಲ ಕಷ್ಟಪಟ್ಟು ಯೋಜನಾಬದ್ಧವಾಗಿ ಓದಿ ಮುಂದೆ ಬರಬೇಕು ಎಂದರು.
ಮೈಸೂರು ತಾಲೂಕು ಬಿಇಒ ಎಂ. ಪ್ರಕಾಶ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಾಗಾರ ನಡೆಸಿಕೊಟ್ಟರು. ಪ್ರಧಾನ ಕಾರ್ಯದರ್ಶಿ ಉಮೇಶ್, ಜ್ಯೋತಿ ಗಣೇಶ್ ಶೆಣೈ, ವಂದನಾ ಶೆಣೈ, ಶಿಲ್ಪಾ ಉಮೇಶ್, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ನ.ಗಂಗಾಧರಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net