ಸ್ಮಾರ್ಟ್ ಬದಲು ಲಿವಿಂಗ್ ಸಿಟಿ ಜರೂರಾಗಲಿ

ವಿಶ್ವೇಶ್ವರ ನಗರದಲ್ಲಿರುವ ಎಂಬಿಸಿಟಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಪಿ.ರಮೇಶ್ ಕುಮಾರ್, ಎನ್.ಸುಬ್ರಮಣ್ಯ, ಕೆ.ಆರ್.ಪ್ರಭಾಕರ ರಾವ್, ಎಂ.ಡಿ.ಪ್ರವೀಣ್ ಪಾಲ್, ಸಿ.ಡಿ.ಕೃಷ್ಣ, ಎಸ್.ವಾಸುದೇವನ್ ಇದ್ದರು.
ವಿಶ್ವೇಶ್ವರ ನಗರದಲ್ಲಿರುವ ಎಂಬಿಸಿಟಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಪಿ.ರಮೇಶ್ ಕುಮಾರ್, ಎನ್.ಸುಬ್ರಮಣ್ಯ, ಕೆ.ಆರ್.ಪ್ರಭಾಕರ ರಾವ್, ಎಂ.ಡಿ.ಪ್ರವೀಣ್ ಪಾಲ್, ಸಿ.ಡಿ.ಕೃಷ್ಣ, ಎಸ್.ವಾಸುದೇವನ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹುಲಿ ಯೋಜನೆ ಸಿಸಿಎ್ ರಮೇಶ್ ಕುಮಾರ್ ಅಭಿಪ್ರಾಯ
  • ವಿಲ್ಡರ್ಸ್‌ ಅಸೋಸಿಯೇಷನ್ ವತಿಯಿಂದ ಪರಿಸರ ದಿನಾಚರಣೆ
ಮೈಸೂರು ಸೇರಿದಂತೆ ದೇಶದೆಲ್ಲೆಡೆ ಲಿವಿಂಗ್ ಸಿಟಿ ನಿರ್ಮಾಣವಾಗಬೇಕಿದೆ ಎಂದು ಹುಲಿ ಯೋಜನೆಯ ಸಿಸಿಎಫ್ ಡಾ.ಪಿ.ರಮೇಶ್ ಕುಮಾರ್ ಹೇಳಿದರು.
ನಗರದ ಬಿಲ್ಡರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾದ ವತಿಯಿಂದ ವಿಶ್ವೇಶ್ವರ ನಗರದಲ್ಲಿರುವ ಎಂಬಿಸಿಟಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಅತಿಯಾದ ಪರಿಸರ ಮಾಲಿನ್ಯದಿಂದ ನಗರದ ಪ್ರದೇಶಗಳಲ್ಲಿ ಬದುಕುವುದು ದುಸ್ತರವಾಗಿದೆ. ಅಭಿವೃದ್ಧಿಯತ್ತ ನಗರಗಳು ದಾಪುಗಾಲು ಇಡುತ್ತಿದ್ದಂತೆ ಮಾಲಿನ್ಯ ಪ್ರಮಾಣವೂ ಹೆಚ್ಚಾಗುತ್ತಿದೆ. ತಾಪಮಾನ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿನ ದೇಶದಲ್ಲಿನ ನಗರಗಳು ಸ್ಮಾರ್ಟ್ ಸಿಟಿಗಳಾಗುವುದಕ್ಕಿಂದತ ಲಿವಿಂಗ್ ಸಿಟಿಗಳಾಗಿ ಅಭಿವೃದ್ಧಿಯಾಗಬೇಕಿರುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಪರಿಸರಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾದರೆ ಮಾತ್ರ ಮೈಸೂರು ಸೇರಿದಂತೆ ದೇಶದಲ್ಲಿನ ನಗರಗಳು ಲಿವಿಂಗ್ ಸಿಟಿಯಾಗಿ ಪರಿವರ್ತನೆಯಾಗಲು ಸಾಧ್ಯ. ಪರಿಸರ ಸಂರಕ್ಷಣೆ ನಮ್ಮ ಹೊಣೆಯಾಗಿದ್ದು, ಇದಕ್ಕೆ ಪ್ರತಿಯೋಬ್ಬರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಎಂಬಿಸಿಟಿ ಮ್ಯಾನೇಜಿಂಗ್ ಟ್ರಸ್ಟಿ ಎನ್.ಸುಬ್ರಮಣ್ಯ, ಬಿಎಐ ಮೈಸೂರು ಶಾಖೆ ಅಧ್ಯಕ್ಷ ಕೆ.ಆರ್.ಪ್ರಭಾಕರ ರಾವ್, ಕಾರ್ಯದರ್ಶಿ ಎಂ.ಡಿ.ಪ್ರವೀಣ್ ಪಾಲ್, ಡಬ್ಲೂಇಎಂ ಸಮಿತಿ ಅಧ್ಯಕ್ಷ ಸಿ.ಡಿ.ಕೃಷ್ಣ, ಕಾರ್ಯದರ್ಶಿ ಎಸ್.ವಾಸುದೇವನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net