ಆಯುಷ್ ಇಲಾಖೆಯಿಂದ ವಿನೂತನ ಯೋಗ ಸ್ಪರ್ಧೆ

ಯೋಗ ಸ್ಪರ್ಧೆ
ಯೋಗ ಸ್ಪರ್ಧೆ
Published on

ಪ್ರಮುಖ ಮುಖ್ಯಾಂಶಗಳು

  • ಯುವಕರನ್ನು, ವಿದ್ಯಾರ್ಥಿಗಳನ್ನು ಯೋಗದೆಡೆಗೆ ಆಕರ್ಷಿಸುವ ಸಲುವಾಗಿ ವಿನೂತನ ಯೋಗ ಸ್ಪರ್ಧೆ
  • ಸ್ಪರ್ಧೆಯಲ್ಲಿ ಎಲ್ಲ ವಯೋಮಾನದವರು ಭಾಗವಹಿಸುವ ಅವಕಾಶ
ಮೈಸೂರು: ರಾಜ್ಯ ಸರ್ಕಾರದ ಆಯುಷ್ ಇಲಾಖೆ, ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಿಂದ ಅಂತಾರರಾಷ್ಟ್ರೀಯ 12ನೇಯೋಗ ದಿನಾಚರಣೆ ಅಂಗವಾಗಿ ವಿನೂತನ ಯೋಗ ಸ್ಪರ್ಧೆ ಆಯೋಜಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷವಾಗಿ ಯುವಕರನ್ನು, ವಿದ್ಯಾರ್ಥಿಗಳನ್ನು ಯೋಗದೆಡೆಗೆ ಆಕರ್ಷಿಸುವ ಸಲುವಾಗಿ ವಿನೂತನ ಯೋಗ ಸ್ಪರ್ಧೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ನಡೆಸಲಾಗುತ್ತಿದೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಆಯುಷ್ ಇಲಾಖೆಯಿಂದ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 3000 ರೂ., ದ್ವಿತೀಯ ಬಹುಮಾನ 2000 ರೂ. ಹಾಗೂ ತೃತೀಯ ಬಹುಮಾನ 1000 ರೂ. ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ಪರ್ಧೆಯಲ್ಲಿ ಎಲ್ಲ ವಯೋಮಾನದವರು ಭಾಗವಹಿಸುವ ಅವಕಾಶವನ್ನು ಕಲ್ಪಿಸಿದ್ದು, ಜೂನ್ 18 ಸಂಜೆ 4 ಗಂಟೆಯೊಳಗಾಗಿ GARC MYSURU Instagram ಖಾತೆಯಲ್ಲಿ ರಿಜಿಸ್ಟರ್ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಮೇಮ್ ಯೋಗ, ಗಿಬ್ಲಿ ಯೋಗ, ರೀಲ್ ಯೋಗ, ಸರಿಗಮಪ ಯೋಗ, ಯೋಗ ಲೇಖನ ಜ್ಞಾನ ಯಜ್ಞ, ಯೋಗ ಪ್ರಬಂಧ, ಪ್ರಾಪ್ ಯೋಗ, ಯೋಗ ಕ್ವಿಜ್, ಯೋಗ ನೃತ್ಯ, ಯೋಗ ವಾಕ್ಯ, ಯೋಗ ವೈಜ್ಞಾನಿಕ ಲೇಖನ ಸೇರಿದಂತೆ 12 ಸ್ಪರ್ಧೆಗಳನ್ನು ಒಳಗೊಂಡಿದೆ. ಸ್ಪರ್ಧೆಗಳ ವಿವರ ಹಾಗೂ ಷರತ್ತುಗಳಿಗಾಗಿ instagram pageಗೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net