ವಿಜಯನಗರದಲ್ಲಿ 6ರಿಂದ ಬೇಸಿಗೆ ಶಿಬಿರ

Adamya Rangshala
Adamya Rangshala
Published on

ಪ್ರಮುಖ ಮುಖ್ಯಾಂಶಗಳು

  • ಅದಮ್ಯ ರಂಗಶಾಲೆ ಕಾರ್ಯದರ್ಶಿ ಚಂದ್ರು ಮಂಡ್ಯ ಮಾಹಿತಿ
ಅದಮ್ಯ ರಂಗ ಶಾಲೆ ವತಿಯಿಂದ 5ರಿಂದ 13 ವರ್ಷದ ಮಕ್ಕಳಿಗಾಗಿ ಏ.6ರಿಂದ 30 ದಿನಗಳ ಮಕ್ಕಳ ಬೇಸಿಗೆ ಶಿಬಿರವನ್ನು ವಿಜಯನಗರ ಮೂರನೇ ಹಂತದಲ್ಲಿರುವ ವಿ.ಕೆ.ಪಬ್ಲಿಕ್ ಸ್ಕೂಲ್ (ಸಪ್ತಮಾತೃಕಾ ಚೌಡೇಶ್ವರಿ ದೇವಸ್ಥಾನದ ಎದುರು)ಆಯೋಜಿಸಲಾಗಿದೆ ಎಂದು ಅದಮ್ಯ ರಂಗಶಾಲೆ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದರು.
ಅದಮ್ಯ ರಂಗ ಶಾಲೆಯು ಕಳೆದ ಎಂಟು ವರ್ಷಗಳಿಂದ ಮೈಸೂರಿನ ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ. ಮಕ್ಕಳ ಹಾಗೂ ವಯಸ್ಕರಿಗೆ ಅಭಿನಯ ತರಬೇತಿ ಕಾರ್ಯಾಗಾರ, ನಾಟಕೋತ್ಸವ, ನಾಟಕ ಪ್ರದರ್ಶನ ಹಾಗೂ ಬೇಸಿಗೆ ಶಿಬಿರಗಳನ್ನು ಯಶಸ್ವಿಯಾಗಿ ಸಂಘಟಿಸುತ್ತಿದೆ. ಮುಂದುವರಿದ ಭಾಗವಾಗಿ ಈ ಬೇಸಿಗೆ ಶಿಬಿರ ಆಯೋಜಿಸಿದೆ ಎಂದು ಬುಧವಾರ ಸುದ್ದಿಗೋಷ್ಠೀಯಲ್ಲಿ ಮಾಹಿತಿ ನೀಡಿದರು.
‘ಬಾಲಂಗೋಚಿ’ ಶೀರ್ಷಿಕೆಯಡಿ ಶಿಬಿರ ನಡೆಯಲಿದೆ. ‘ಪುಟಾಣಿಗಳ ಪುಂಡಾಟ’ ಅಡಿಬರಹವೇ ಹೇಳುವ ಹಾಗೆ ಒಂದು ತಿಂಗಳ ಕಾಲ ಆಡಿ, ಹಾಡಿ, ಕುಣಿದು, ನಲಿದು, ತರ‌್ಲೆ, ತುಂಟಾಟಗಳ ನಡುವೆ ರಂಗಾಟಗಳು, ರಂಗಗೀತೆಗಳು, ಜನಪದ ಗೀತೆಗಳು, ಭಾವಗೀತೆಗಳು, ದೇಸಿ ಆಟಗಳು, ಚಿತ್ರಕಲೆ, ಮಾಸ್ಕ್ ಮೇಕಿಂಗ್, ಮಕ್ಕಳ ಸಂತೆ, ವರ್ಲಿ ಆರ್ಟ್ಸ್, ಮಕ್ಕಳ ಸಿನಿಮಾ, ಪೇಪರ್ ಕ್ರಾಫ್ಟ್, ವಾಯ್ಸ ಕಲ್ಚರ್, ಹೋಳಿಯಾಟ, ಮೈಮ್, ಕಂಗಿಲು ನೃತ್ಯ, ಚಿನ್ನು ಕುಣಿತ, ಪಟ್ಟದ ಕುಣಿತ, ದೊಣ್ಣೆ ವರೆಸೆ, ಹುಲಿ ಕುಣಿತ, ಪೂಜಾ ಕುಣಿತ, ಕಂಸಾಳೆ, ನಾಟಕಗಳು ಇಷ್ಟೆಲ್ಲಾ ಕಲೆಗಳ ಪರಿಚಯ ಮಾಡಿಕೊಳ್ಳುವುದರ ಜತೆಗೆ ಪ್ರದರ್ಶನಕ್ಕೂ ಸಜ್ಜುಗೊಳಿಸಲಾಗುತ್ತದೆ ಎಂದರು.
ಶಿಬಿರವು ಏಪ್ರಿಲ್ 6ರಂದು ಪ್ರಾರಂಭವಾಗಿ ಮೇ 6ರಂದು ಮುಕ್ತಾಯವಾಗುತ್ತದೆ. ಪ್ರತಿದಿನ ಬೆಳಗ್ಗೆ 10.30 ರಿಂದ ಸಂಜೆ 4.30ರವರೆಗೆ ಶಿಬಿರ ನಡೆಯುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net