ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ ಮಾತನಾಡಿ, ವಿಶ್ವಾದ್ಯಂತ ಹಾಲಿನ ಉತ್ಪಾದನೆ ಹೆಚ್ಚಳ ಆಗುತ್ತಿದೆ. ಹಾಲು ಉತ್ಪಾದನೆ ಮಾಡುವ ರೈತರ ಹಿತಾಸಕ್ತಿ ಕಾಪಾಡಬೇಕು. ಈ ನಿಟ್ಟಿನಲ್ಲಿ ಉತ್ಪಾದನೆಯಾದ ಹಾಲನ್ನು ಬಳಸುವುದಕ್ಕೆ ಜನರು ಮುಂದಾಗಬೇಕು. ಹಾಲು ಒಂದು ಸಂಪೂರ್ಣ ಆಹಾರವಾಗಿದೆ. ಹಾಲಿನಲ್ಲಿ ದೇಹಕ್ಕೆ ಬೇಕಾದ ಎಲ್ಲ ರೀತಿಯ ಅಂಶಗಳು ಇವೆ. ಒಂದೊಂದು ಧಾನ್ಯದಲ್ಲಿ ಒಂದೊಂದು ವಿಟಮಿನ್ ಇದೆ. ಆದರೆ, ಹಾಲಿನಲ್ಲಿ ಸಂಪೂರ್ಣ ವಿಟಮಿನ್‌ಗಳಿರುತ್ತವೆ. ಎಲ್ಲ ಪೋಷಕಾಂಶಗಳು ಒಟ್ಟಾಗಿರುವ ಕಾರಣಕ್ಕಾಗಿ ಹಾಲನ್ನು ಒಂದು ಸಂಪೂರ್ಣ ಗುಣಮಟ್ಟದ ಆಹಾರ ಆಗಿದೆ ಎಂದರು.