ಅರ್ಚಕರಿಗೆ ನೀಡುತ್ತಿರುವ ತಸ್ತೀಕ್ ಹಣ ಹೆಚ್ಚಳ ಮಾಡಿ

Increase
Increase
Published on
ಮುಜರಾಯಿ ದೇವಸ್ಥಾನಗಳಲ್ಲಿ ಶೇ.90ರಷ್ಟು ಗ್ರಾಮೀಣ ಪ್ರದೇಶಗಳಲ್ಲಿವೆ. ಇಲ್ಲಿರುವ ಸಿ ವರ್ಗದ ದೇವಸ್ಥಾನ ಸಂಪೂರ್ಣ ಕಡೆಗಣಿಸಲ್ಪಟ್ಟಿವೆ. ಅವುಗಳ ಅರ್ಚಕರಿಗೆ ಸದ್ಯಕ್ಕೆ ನೀಡುತ್ತಿರುವ ಮಾಸಿಕ 6 ಸಾವಿರ ರೂ. ತಸ್ತೀಕ್ ಜೀವನ ನಡೆಸಲು ಸಾಲದ ಕಾರಣ ಸರ್ಕಾರ ಕೂಡಲೇ ಅದನ್ನು 10 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಬೇಕು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಜಿಲ್ಲಾಧ್ಯಕ್ಷ ಬನ್ನೂರು ನಾಗರಾಜು ಮನವಿ ಮಾಡಿದರು.
ಈಗ ಬರುತ್ತಿರುವ ಹಣದಲ್ಲಿಯೇ ತಮ್ಮ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿರುವಾಗ ದೇವಸ್ಥಾನದ ಪೂಜಾ ಸಾಮಗ್ರಿಗಳನ್ನೂ ಖರೀದಿಸಬೇಕು, ಇದು ಸಾಧ್ಯವೇ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಈ ದೇವಾಲಯಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಬೇಕು, ಶೌಚಗೃಹವನ್ನು ಸೂಕ್ತ ಸ್ಥಳದಲ್ಲಿ ನಿರ್ಮಿಸಬೇಕು, ಸಿ ವರ್ಗದ ದೇವಸ್ಥಾನಗಳ ಎಲ್ಲ ಅರ್ಚಕರು, ಪರಿಚಾರಕರಿಗೆ ವಿಮೆ, ಸೇವಾ ಭದ್ರತೆ ಒದಗಿಸಬೇಕು, ಬಿ ಮತ್ತು ಸಿ ವರ್ಗದ ಮುಜರಾಯಿ ದೇವಸ್ಥಾನಗಳಿಗೆ ಉಚಿತ ವಿದ್ಯುತ್ ನೀಡಬೇಕು, ನಿವೃತ್ತಿ ಆದೇಶ ರದ್ದುಗೊಳಿಸಬೇಕು, ದೇವಾಲಯಗಳು ಶಿಥಿಲವಾಗಿರುವುದರಿಂದ ಜೀರ್ಣೋದ್ಧಾರ ಮಾಡಿಸಬೇಕು. ಅವುಗಳಿಗೆ ಸೇರಿದ ಅಂಗಡಿ, ಮಳಿಗೆಗಳ ಬಾಡಿಗೆ ಪರಿಷ್ಕರಿಸಬೇಕು, ಅನಿವಾರ್ಯ ಸಂದರ್ಭ ಎದುರಾದಾಗ ಪೊಲೀಸ್ ರಕ್ಷಣೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಗೋವಿಂದರಾಜ್, ಬಸವರಾಜ್, ಕೆ.ಎಸ್.ಎ.ದೀಕ್ಷಿತ್, ಟಿ.ಕೆ.ಶ್ಯಾಮಸುಂದರ್ ದೀಕ್ಷಿತ್, ಕೆ.ಮಂಜುನಾಥ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net