ಶ್ರೀಬಾಣೇಶ್ವರಸ್ವಾಮಿ ಸಮುದಾಯ ಭವನ ಉದ್ಘಾಟನೆ

ಎಚ್.ಡಿ.ಕೋಟೆ ತಾಲೂಕಿನ ಮಗ್ಗೆ ಗ್ರಾಮದಲ್ಲಿ ಶ್ರೀ ಬಾಣೇಶ್ವರಸ್ವಾಮಿ ಸಮುದಾಯ ಭವನವನ್ನು ಭಾಗ್ಯಲಕ್ಷ್ಮೀ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸಿದರು.
ಎಚ್.ಡಿ.ಕೋಟೆ ತಾಲೂಕಿನ ಮಗ್ಗೆ ಗ್ರಾಮದಲ್ಲಿ ಶ್ರೀ ಬಾಣೇಶ್ವರಸ್ವಾಮಿ ಸಮುದಾಯ ಭವನವನ್ನು ಭಾಗ್ಯಲಕ್ಷ್ಮೀ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸಿದರು.
Published on
ಎಚ್.ಡಿ.ಕೋಟೆ : ತಾಲೂಕಿನ ಮಗ್ಗೆ ಗ್ರಾಮದಲ್ಲಿ ಮಾಜಿ ಸಂಸದ ದಿ.ವಿ.ಶ್ರೀನಿವಾಸಪ್ರಸಾದ್ ಅವರ ಅವಧಿಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅನುದಾನದಲ್ಲಿ ನಿರ್ಮಿಸಿದ್ದ ಶ್ರೀ ಬಾಣೇಶ್ವರಸ್ವಾಮಿ ಸಮುದಾಯ ಭವನವನ್ನು ಪತ್ನಿ ಭಾಗ್ಯಲಕ್ಷ್ಮೀ ವಿ.ಶ್ರೀನಿವಾಸ ಪ್ರಸಾದ್ ಇತ್ತೀಚೆಗೆ ಉದ್ಘಾಟಿಸಿದರು.
ಎಚ್.ಡಿ.ಕೋಟೆ ತಾಲೂಕಿನ ಬಗ್ಗೆ ಶ್ರೀನಿವಾಸಪ್ರಸಾದ್‌ಗೆ ವಿಶೇಷ ಕಾಳಜಿ ಇತ್ತು. ಅದರಂತೆ ತಾಲೂಕಿನ ಅಭಿವೃದ್ಧಿಗೆ ನೆರವಾಗುತ್ತಿದ್ದರು. ಸಮುದಾಯ ಭವನದ ನಿರ್ಮಾಣಕ್ಕೆ ಅವರು ನೀಡಿದ ಅನುದಾನವನ್ನು ಶ್ರೀ ಬಾಣೇಶ್ವರಸ್ವಾಮಿ ದೇವಸ್ಥಾನ ಸಮಿತಿಯವರು ಸದುಪಯೋಗ ಪಡಿಸಿಕೊಂಡು ನಿರ್ಮಿಸಿರುವ ಭವನ ದೇವಸ್ಥಾನದ ಭಕ್ತರ ಉಪಯೋಗಕ್ಕೆ ಬರಲಿ ಎಂದು ಆಶಿಸಿದರು.
ವಿ.ಶ್ರೀನಿವಾಸಪ್ರಸಾದ್ ಪುತ್ರಿ ಪ್ರತಿಮಾ ಪ್ರಸಾದ್ ಮಾತನಾಡಿದರು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಿ.ಸುಂದರ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಭರತ್ ರಾಮಸ್ವಾಮಿ, ವಿ.ಶ್ರೀನಿವಾಸಪ್ರಸಾದ್ ಅಭಿಮಾನಿ ಬಳಗದ ಅಧ್ಯಕ್ಷ ನಂದಕುಮಾರ್, ಜಿಪಂ ಮಾಜಿ ಸದಸ್ಯ ಎಂ.ಎನ್.ಜಗದೀಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್, ವೈ.ಪಿ.ನಾಗರಾಜ್, ರಾಗಲಕುಪ್ಪೆ ವಿನೋದ್, ಬಾಣೇಶ್ವರ ಸ್ವಾಮಿ ದೇವಸ್ಥಾನದ ಸಮಿತಿ ಕಾರ್ಯದರ್ಶಿ ವಿ.ರಾಜಪ್ಪ, ಎಚ್.ಡಿ.ರತ್ನಯ್ಯ, ನಂದೀಶ್, ಸರಗೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ನೇಮಿಚಂದ್ರ, ಬೀರಂಬಳ್ಳಿ ರಾಮಣ್ಣ, ನವೀನ್ ದಾಸ್, ಎ.ಪಿ.ಕೃಷ್ಣ, ಕೆ.ಸುಬ್ಬೇಗೌಡ, ಎಂ.ಜಯಣ್ಣ ಇತರರು ಇದ್ದರು.
ಪದಾಧಿಕಾರಿಗಳ ಆಯ್ಕೆ : ಕಾರ್ಯಕ್ರಮದ ನಂತರ ನಡೆದ ಶ್ರೀಬಾಣೇಶ್ವರಸ್ವಾಮಿ ಟ್ರಸ್ಟ್‌ನ ಸರ್ವ ಸದಸ್ಯರ ಸಭೆಯಲ್ಲಿ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ವಿಶ್ರಾಂತ ರಾಜ್ಯ ಹಾಗೂ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಾಗಲಕುಪ್ಪೆ ವಿನೋದ್, ಅಂತರಸಂತೆ ಸುಬ್ರಹ್ಮಣ್ಯ, ಕಾರ್ಯದರ್ಶಿಯಾಗಿ ಹುಣಸೇಕುಪ್ಪೆ ಸುಬ್ರಹ್ಮಣ್ಯ, ಖಜಾಂಚಿಯಾಗಿ ಮೈಸೂರಿನ ಎಂ.ವಿ. ನಂದಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net