ಬೆಳಿಗ್ಗೆ 10.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಸ್ರೀ ಸೋಮನಾಥ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಡಿ. ಹರೀಶ್‌ಗೌಡ ವಹಿಸಲಿದ್ದು, ಧಾರ್ಮಿಕ ಕಾರ್ಯಕ್ರಮವನ್ನು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ವಕೀಲ ಬಿ.ಎಸ್. ಯೋಗನಂದ್, ಕಿರಂಗೂರು ಬಸವರಾಜು, ನಾಗಣ್ಣಗೌಡ, ರವಿಗೌಡ, ಸುಭಾಷ್, ರಾಜು ಶಿವರಾಜೇಗೌಡ, ಬಿಳಿಕೆರೆ ಪ್ರಸನ್ನ, ಕಟ್ಟನಾಯಕ, ಎಚ್.ಆರ್. ರಮೇಶ್, ಕೆ. ಗಣಪತಿ, ಹನಗೋಡು ಮಂಜುನಾಥ, ರೂಪಾನಂದೀಶ್, ನೇರಳಕುಪ್ಪೆ ಗ್ರಾಪಂ ಅಧ್ಯಕ್ಷೆ ಗೀತಾ ಸುರೇಶ್, ಉಪಾಧ್ಯಕ್ಷೆ ರುಕ್ಕಿಣಿ ಸುರೇಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.