ಗಣಪತಿ ದೇಗುಲ ಉದ್ಘಾಟನೆ

ಹುಣಸೂರು ನಗರದ ಕನಕ ಭವನದಲ್ಲಿ ತಾಲೂಕು ಕುರುಬರ ಅಭಿವೃದ್ಧಿ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬೆಳ್ಳಿಗದೆ ನೀಡಿ ಗೌರವಿಸಲಾಯಿತು. ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ವಾಸೇಗೌಡ, ಜಯರಾಂ, ಡಿ.ಕೆ.ಕುನ್ನೇಗೌಡ ಇದ್ದರು.
ಹುಣಸೂರು ನಗರದ ಕನಕ ಭವನದಲ್ಲಿ ತಾಲೂಕು ಕುರುಬರ ಅಭಿವೃದ್ಧಿ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬೆಳ್ಳಿಗದೆ ನೀಡಿ ಗೌರವಿಸಲಾಯಿತು. ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ವಾಸೇಗೌಡ, ಜಯರಾಂ, ಡಿ.ಕೆ.ಕುನ್ನೇಗೌಡ ಇದ್ದರು.
Published on
ಹುಣಸೂರು: ನಗರದ ಮೈಸೂರು ಹೆದ್ದಾರಿಯ ಬಳಿ ಇರುವ ಕನಕ ಭವನದಲ್ಲಿ ನೂತನವಾಗಿ ದಾನಿಗಳ ನೆರವಿನಿಂದ ನಿರ್ಮಾಣಗೊಂಡಿರುವ ಗಣಪತಿ ದೇವಾಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಸೋಮವಾರ ಭವನದ ಆವರಣದಲ್ಲಿ ತಾಲೂಕು ಕುರುಬರ ಅಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವಾಲಯ ಉದ್ಘಾಟಿಸಿ ಮಾತನಾಡಿದರು.
ಮೂರು ವರ್ಷಗಳಿಂದ ಹುಣಸೂರಿಗೆ ಬಂದಿರಲಿಲ್ಲ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಮಂಜುನಾಥ್ ಗೆಲ್ಲಲು ಸಾಧ್ಯವಾಗಲಿಲ್ಲ. ಅವರು ಗೆದ್ದಿದ್ದರೆ ಖಂಡಿತ ಮಂತ್ರಿಯಾಗಿರುತ್ತಿದ್ದರು. ಹುಣಸೂರು ಜನರ ಬಗ್ಗೆ ನನಗೆ ಅಪಾರ ಪ್ರೀತಿ ಇದೆ. ಇದು ನಮ್ಮ ಕ್ಷೇತ್ರ ಇದ್ದಹಾಗೆ. ಮುಂದೆಯೂ ಮಂಜುನಾಥ್‌ಗೆ ಸಪೋರ್ಟ್ ಮಾಡ್ತೀರಾ ಎನ್ನುವ ನಂಬಿಕೆ ನನ್ನದು. ನಾನು ರಾಜಕಾರಣ ಮಾಡುವುದು ಹಿಂದುಳಿದವರ್ಗ, ಅಲ್ಪಸಂಖ್ಯಾತ ಮತ್ತು ಅವಕಾಶ ವಂಚಿತರ ಪರವಾಗಿ 42 ವರ್ಷಗಳಿಂದ ನನ್ನನ್ನು ಬೆಂಬಲಿಸಿದ್ದೀರಿ. ಮುಂದೆ 2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಳೆದ ಮೂರು ವರ್ಷಗಳಲ್ಲಿ ಮಹಿಳೆಯರಿಗೆ ಶಕ್ತಿ ಕೊಡುವ ಕಾರ್ಯ ಮಾಡಿದ್ದೇನೆ. ಜನಪರ ಯೋಜನೆಗೆಳನ್ನು ಜಾರಿಗೆ ತಂದಿದ್ದೇನೆ. ಹುಣಸೂರಿನಲ್ಲಿ ಮತ್ತೆ ಮಂಜುನಾಥ ಗೆದ್ದೇ ಗೆಲ್ಲುತ್ತಾರೆ. ಮಂಜುನಾಥನಿಗೆ ನಿಮ್ಮ ಆಶೀರ್ವಾದ ಇರಲಿ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಕುರುಬರ ಅಭಿವೃದ್ಧಿ ಸಮಿತಿ ಪರವಾಗಿ ಮುಖ್ಯಮಂತ್ರಿಗೆ ಬೆಳ್ಳಿಗದೆ ನೀಡಿ ಸನ್ಮಾನಿಸಲಾಯಿತು. ತಾಲೂಕು ಕುರುಬರ ಸಮಿತಿ ಅಧ್ಯಕ್ಷ ಡಿ.ಕೆ.ಕುನ್ನೇಗೌಡ ಹಲವು ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿಗೆ ಸಲ್ಲಿಸಿದರು. ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಮುಖಂಡರಾದ ವಾಸೇಗೌಡ, ಸೀರೇನಹಳ್ಳಿ ಬಸವರಾಜು, ಮಹದೇವ, ಗಣೇಶ್ ಕುಮಾರಸ್ವಾಮಿ, ಎ.ಪಿ.ಸ್ವಾಮಿ, ಕಂಬಳಿ ಜಯರಾಮ್, ನೇರಳಕುಪ್ಪೆ ಮಹದೇವ್, ಕಣಗಾಲು ರಾಮೇಗೌಡ, ಮಂಡ್ಯ ರಮೇಶ್ ಸೇರಿದಂತೆ ಸಮಾಜದವರು ಇದ್ದರು.
ದೇವಾಲಯ ನಿರ್ಮಾಣಕ್ಕೆ ಆರ್ಥಿಕ ದೇಣಿಗೆ ನೀಡಿದ ಅಶೋಕ್ ರಾಜಲಿಂಗಯ್ಯ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net