ತಜ್ಞರ ಸಮಿತಿ ವರದಿಯನ್ನು ಆಧಾರಿಸಿ ಮತ್ತೆ ಶುರು ಮಾಡಲಿದೆ ಸಫಾರಿ
ರೈತರು ಸುಖಾಸುಮ್ಮನೆ ಪ್ರತಿಭಟನೆ ಮಾಡಿದರೆ ಅವರಿಗೆ ಏನು ಹೇಳಲು ಸಾಧ್ಯ
ಮೈಸೂರು: ಸಚಿವ ಡಾ.ಎಚ್.ಸಿ.ಮಹದೇವಪ್ಪ ಮುಖ್ಯಮಂತ್ರಿಯಾದರೆ ನನಗೆ ಖುಷಿ ಇದೆ ಎಂದು ಪಶುಸಂಗೋಪನೆ ಮತ್ತು ರೇಷ್ಮ ಸಚಿವ ಕೆ.ವೆಂಕಟೇಶ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದೇವಪ್ಪ ನನ್ನ ಆತ್ಮೀಯ ಸ್ನೇಹಿತ. ಹೀಗಾಗಿ, ಆತ ಸಿಎಂ ಆಗಲಿ ಎಂದು ಹಾರೈಸುತ್ತೇನೆ ಎಂದರು
ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ. ಖಾಲಿಯಾದ ಮೇಲೆ ಒಕ್ಕಲಿಗರೋ, ಲಿಂಗಾಯತರೋ, ದಲಿತರೋ ಸಿಎಂ ಎನ್ನುವ ಪ್ರಶ್ನೆ ಬರುತ್ತದೆ. ದಲಿತ ಸಿಎಂ ಕೂಗು ಪಕ್ಷದಲ್ಲಿ ಇದೆಯೋ, ಇಲ್ವೋ ನನಗೆ ಗೊತ್ತಿಲ್ಲ ಎಂದರು.
ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿರುವ ಬಂಡೀಪುರ-ನಾಗರಹೊಳೆಯಲ್ಲಿ ಸರ್ಕಾರ ಸುಖಾಸುಮ್ಮನೆ ಸಫಾರಿಯನ್ನು ಮತ್ತೆ ಆರಂಭಿಸಿಲ್ಲ. ಈ ಬಗ್ಗೆ ತಜ್ಞರ ಸಮಿತಿ ಮಾಡಿ ಅದರ ವರದಿಯನ್ನು ಆಧಾರಿಸಿ ಸಫಾರಿಯನ್ನು ಮತ್ತೆ ಶುರು ಮಾಡಲಾಗಿದೆ.
ರೈತರು ಸುಖಾಸುಮ್ಮನೆ ಪ್ರತಿಭಟನೆ ಮಾಡಿದರೆ ಅವರಿಗೆ ಏನು ಹೇಳಲು ಸಾಧ್ಯ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.