ಎಚ್.ಆರ್.ಲೋಕೇಶ್ ಮತ್ತು ಎನ್.ಎಸ್.ಉಷಾರಾಣಿ 2011ರ ನ. 14 ರಂದು ಮದುವೆಯಾಗಿದ್ದರು. ಈ ವೇಳೆ ಲೋಕೇಶ್ 2 ಲಕ್ಷ ರೂ.ನಗದು, 100 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿಯ ಪದಾರ್ಥ ವರದಕ್ಷಿಣೆಯಾಗಿ ಪಡೆದಿದ್ದರು. ಅಷ್ಟಕ್ಕೆ ತೃಪ್ತಿಪಡದ ಲೋಕೇಶ್, ಬಿಸಿನೆಸ್ ಮಾಡಲು 50,000 ರೂ. ಹೆಚ್ಚಿನ ವರದಕ್ಷಿಣೆಯಾಗಿ ತರುವಂತೆ ಮೃತಳಿಗೆ ಕಿರುಕುಳ ನೀಡಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ. ಈ ಹಿಂಸೆಯನ್ನು ತಾಳಲಾರದೆ ಉಷಾರಾಣಿ 2014ರಲ್ಲಿ ತಾನು ವಾಸವಾಗಿದ್ದ ಮನೆಯ ಬೆಡ್ ರೂಂನ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದರು.