ಹುಣಸೂರು ರೋಟರಿಗೆ ಸಮಗ್ರ ಪ್ರಶಸ್ತಿ

ಹುಣಸೂರು ರೋಟರಿ ಸಂಸ್ಥೆ ತಂಡವು ಮಡಿಕೇರಿಯಲ್ಲಿ ಆಯೋಜಿಸಿದ್ದ ಕಲಾ ಕಲರವ(ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ)ದಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ರೊ.ಎಚ್.ಆರ್.ಕೃಷ್ಣಕುಮಾರ್, ಧರ್ಮಾಪುರ ಶ್ಯಾಮ್, ಡಾ.ಕೆ.ಪಿ.ಪ್ರಸನ್ನ, ಡಾ.ಬಸವರಾಜು ಇತರರು ಇದ್ದರು.
ಹುಣಸೂರು ರೋಟರಿ ಸಂಸ್ಥೆ ತಂಡವು ಮಡಿಕೇರಿಯಲ್ಲಿ ಆಯೋಜಿಸಿದ್ದ ಕಲಾ ಕಲರವ(ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ)ದಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ರೊ.ಎಚ್.ಆರ್.ಕೃಷ್ಣಕುಮಾರ್, ಧರ್ಮಾಪುರ ಶ್ಯಾಮ್, ಡಾ.ಕೆ.ಪಿ.ಪ್ರಸನ್ನ, ಡಾ.ಬಸವರಾಜು ಇತರರು ಇದ್ದರು.
Published on
ಹುಣಸೂರು: ಮಡಿಕೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರೋಟರಿ ವಲಯ 6ರ 2025-26ನೇ ಸಾಲಿನ ಕಲಾ ಕಲರವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹುಣಸೂರು ರೋಟರಿ ಸಂಸ್ಥೆ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಮಡಿಕೇರಿಯ ಮಿಸ್ಟಿ ಹಿಲ್ಸ್ ರೋಟರಿ ಕ್ಲಬ್ ಆತಿಥ್ಯದಲ್ಲಿ ಜನರಲ್ ಕಾರ್ಯಪ್ಪ ಕಾಲೇಜಿನಲ್ಲಿ ಆಯೋಜಿಸಿದ್ದ್ದ ಸೋಲೋ ಸಾಂಗ್, ಸೋಲೋ ಡ್ಯಾನ್ಸ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಪಡೆದ ಸಂಸ್ಥೆ ಸಮಗ್ರ ಪ್ರಶಸ್ತಿಗೆ ಭಾಜನವಾಯಿತು.

ಗುಂಪು ಗಾಯನ ವಿಭಾಗದಲ್ಲಿ ಕುವೆಂಪು ವಿರಚಿತ ಓ ನನ್ನ ಚೇತನ ಹಾಡು ಹಾಡುವ ಮೂಲಕ ಸಂಸ್ಥೆಯ ಗಾಯನ ತಂಡ ಪ್ರಥಮ ಸ್ಥಾನ ಪಡೆಯಿತು. ಸೋಲೋ ಡ್ಯಾನ್ಸ್‌ನಲ್ಲಿ ಮೃದಂಗ್ ಪ್ರಥಮ ಸ್ಥಾನ ಗಳಿಸಿದರು. ಕ್ಲಬ್ ಸದಸ್ಯರು ಪ್ರದರ್ಶಿಸಿದ ಕಿರುನಾಟಕ ‘ವಾಸನೆಯ ಭೂತಕ್ಕೆ’ ಪ್ರಥಮ ಬಹುಮಾನ ದೊರಕಿತು. ಸ್ಟಾಂಡ್ ಅಪ್ ಕಾಮಿಡಿಯಲ್ಲಿ ಡಾ.ಕೆ.ಬಸವರಾಜು ಪ್ರಥಮ ಸ್ಥಾನ ಗಳಿಸಿದರು. ಯುಗಳಗೀತೆ ವಿಭಾಗದಲ್ಲಿ ಡಾ.ಸಂಗೀತಾ ಮತ್ತು ಚಿಲ್ಕುಂದ ಮಹೇಶ್ ಜೋಡಿ ದ್ವೀತೀಯ ಸ್ಥಾನ ಗಳಿಸಿದರೆ, ಡ್ಯೂಯೆಟ್ ಡ್ಯಾನ್ಸ್ ವಿಭಾಗದಲ್ಲಿ ಡಾ.ಸಂಗೀತಾ ಮತ್ತು ಮೃದಂಗ್ ದ್ವಿತೀಯ ಸ್ಥಾನ ಗಳಿಸಿದರು.

ಇನ್ನು ಗುಂಪು ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಒಟ್ಟು 12 ಬಹುಮಾನ ಪಡೆದು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸ್ಪರ್ಧೆಯಲ್ಲಿ ರೋಟರಿ ಜಿಲ್ಲೆ 3181ರ ವಲಯ 6ರ 7 ರೋಟರಿ ಕ್ಲಬ್‌ಗಳು ಭಾಗವಹಿಸಿದ್ದವು. ಕ್ಲಬ್ ಸದಸ್ಯರ ಸಾಧನೆಗೆ ರೋಟರಿ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ಕಾರ್ಯದರ್ಶಿ ಧರ್ಮಾಪುರ ಶ್ಯಾಮ್ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net