ಪಾಲಕರಿಗೆ ಎಸ್‌ಐಆರ್ ಮಹತ್ವ ತಿಳಿಸಿ

ಹುಣಸೂರು ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಎಸ್‌ಐಆರ್ ಅರಿವು ಜಾಥಾಕ್ಕೆ ತಾಪಂ ಇಒ ಕೆ.ಹೊಂಗಯ್ಯ ಚಾಲನೆ ನೀಡಿದರು. ಪ್ರಾಂಶುಪಾಲೆ ಎನ್.ಬಿ.ಸುಧಾಮಣಿ, ಉಪನ್ಯಾಸಕರಾದ ಧರಣೇಂದ್ರ, ಧರ್ಮೇಗೌಡ, ತಾಪಂ ಸಿಬ್ಬಂದಿ ಪುಷ್ಪಾವತಿ, ಕಲ್ಪನಾ ಇತರರಿದ್ದರು.
ಹುಣಸೂರು ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಎಸ್‌ಐಆರ್ ಅರಿವು ಜಾಥಾಕ್ಕೆ ತಾಪಂ ಇಒ ಕೆ.ಹೊಂಗಯ್ಯ ಚಾಲನೆ ನೀಡಿದರು. ಪ್ರಾಂಶುಪಾಲೆ ಎನ್.ಬಿ.ಸುಧಾಮಣಿ, ಉಪನ್ಯಾಸಕರಾದ ಧರಣೇಂದ್ರ, ಧರ್ಮೇಗೌಡ, ತಾಪಂ ಸಿಬ್ಬಂದಿ ಪುಷ್ಪಾವತಿ, ಕಲ್ಪನಾ ಇತರರಿದ್ದರು.
Published on
ಹುಣಸೂರು: ಬಡವ, ಶ್ರೀಮಂತನೆಂಬ ತಾರತಮ್ಯವಿಲ್ಲದೆ 18ವರ್ಷ ತುಂಬಿದ ದೇಶದ ಪ್ರತಿಯೊಬ್ಬ ಪ್ರಜೆಗೂ ಮತ ಚಲಾಯಿಸುವ ಹಕ್ಕನ್ನು ಸಂವಿಧಾನ ನಮಗೆ ನೀಡಿದ್ದು, ವಿದ್ಯಾರ್ಥಿಗಳು ಮತದಾನದ ಮಹತ್ವದೊಂದಿಗೆ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಕುರಿತು ಅರಿತು ಪಾಲಕರು ಹಾಗೂ ಸಮುದಾಯ ತಿಳಿಸುವಂತೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ ಸಲಹೆ ನೀಡಿದರು.
ಸೋಮವಾರ ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ಎಸ್‌ಐಆರ್ ಅರಿವು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಭವಿಷ್ಯ ನಿರ್ಮಾಣ ಮಾಡಲು ಮತದಾನದ ಹಕ್ಕಿನ ಮಹತ್ವ ಅರಿತುಕೊಳ್ಳಬೇಕು. ಎಸ್‌ಐಆರ್ ಪ್ರಕ್ರಿಯೆಯಿಂದ ಯಾರೂ ವಂಚಿತರಾಗದಂತೆ ಮಾರ್ಗದರ್ಶನ ನೀಡಬೇಕು. ಮತದಾರರ ಪಟ್ಟಿ ಪರಿಷ್ಕರಣೆಗೆ ಆಗಸ್ಟ್ 8 ರವರೆಗೆ ಕಾಲಾವಕಾಶ ನೀಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟ ಹಾಗೂ ಕ್ಷೇತ್ರ ಮಟ್ಟದಲ್ಲಿ ನಿಯೋಜಿಸಿರುವ ಬಿಎಲ್‌ಒಗಳನ್ನು ಸಂಪರ್ಕಿಸಿ ಸರಿಯಾದ ಕ್ರಮದಲ್ಲಿ ಮಾಹಿತಿಯನ್ನು ತುಂಬಿರಿ ಎಂದು ಸಲಹೆ ನೀಡಿದರು.
ಮರಣ ಹೊಂದಿರುವವರು, ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಗೊಂಡಿರುವವರು ಹಾಗೂ ಎರಡೆರಡು ಕಡೆಗಳಲ್ಲಿ ಮತ ಚೀಟಿ ಹೊಂದಿರುವವರು ಇವೇ ಮುಂತಾದ ಎಲ್ಲ ತಪ್ಪುಗಳನ್ನು ಸರಿಪಡಿಸಲು ಮತದಾರರ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆಯಲ್ಲಿ ಮತದಾರರು ತಮಗೆ ದೊರೆತಿರುವ ನಮೂನೆಗಳಲ್ಲಿ ತಪ್ಪಾಗಿ ನಮೂದಿಸದೇ ನಿಯಮಬದ್ಧವಾಗಿ ಮಾಹಿತಿ ಭರ್ತಿ ಮಾಡಬೇಕು ಎಂದರು.
ಜಾಗೃತಿ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎನ್.ಬಿ.ಸುಧಾಮಣಿ, ಹಿರಿಯ ಉಪನ್ಯಾಸಕರಾದ ಚೆಲುವೇಅರಸ್, ಧರ್ಮೇಗೌಡ, ಡಾ.ಜಯಕುಮಾರ್, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಧರಣೇಂದ್ರ, ತಾಲೂಕು ಪಂಚಾಯಿತಿ ಸಿಬ್ಬಂದಿ ಕಲ್ಪನಾ, ಪುಷ್ಪವತಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net