ಹುಣಸೂರು ತಾಲೂಕು ಹೊಸವಾರಂಚಿ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 2 ಲಕ್ಷ ರೂ.ಅನುದಾನ ಮಂಜೂರಾತಿ ಪತ್ರವನ್ನು ಯೋಜನಾಧಿಕಾರಿ ಶುಭಾದೇವಿ ವಿತರಿಸಿದರು. ಸಂಘದ ಅಧ್ಯಕ್ಷ ಆನಂದ್, ಉಪಾಧ್ಯಕ್ಷೆ ಗೀತಾ, ಸಚಿನ್, ಪುಟ್ಟನಂಜಮ್ಮ ಇತರರಿದ್ದಾರೆ.
Published on:
Copied
Follow Us
ಹುಣಸೂರು:ತಾಲೂಕಿನ ಹೊಸವಾರಂಚಿ ಗ್ರಾಮದ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 2 ಲಕ್ಷ ರೂ. ಅನುದಾನ ನೀಡಲಾಯಿತು.
ಸೋಮವಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಕ್ಕಹುಣಸೂರು ಯೋಜನಾ ಕಚೇರಿಯ ಯೋಜನಾಧಿಕಾರಿ ಶುಭಾದೇವಿ ಅನುದಾನದ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಕೃಷಿಯ ಉಪ ಕಸುಬಾದ ಹೈನುಗಾರಿಕೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮಹಿಳೆಯರು ಮನೆಯಲ್ಲಿ ಜಾನುವಾರುಗಳ ಸಾಕಣೆ ಮೂಲಕ ಕುಟುಂಬದ ಆರ್ಥಿಕತೆಗೆ ಬಲ ನೀಡುತ್ತಿದ್ದಾರೆ. ಗೋವು ನಮ್ಮ ದೇಶದಲ್ಲಿ ದೇವರೆಂದು ಪೂಜಿಸಲ್ಪಡುತ್ತಿದ್ದು, ಗೋಮಾತೆಯ ಸೇವೆ ಪುಣ್ಯಕಾರ್ಯವಾಗಿದೆ. ಹಾಲು ಉತ್ಪಾದನೆಯಲ್ಲಿ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದು, ರೈತ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕತೆಗೆ ಬೆನ್ನೆಲುಬಾಗಿ ದುಡಿಯುತ್ತಿರುವುದನ್ನು ಗಮನಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹಗ್ಗಡೆ ಅವರು ಇಂತಹ ಕಾರ್ಯಳಿಗೆ ಆರ್ಥಿಕ ಸಹಾಯ ನೀಡುತ್ತಿದ್ದಾರೆ. ಅನುದಾನದ ಸಂಪೂರ್ಣ ಸದ್ಬಳಕೆ ಸಂಘದಿಂದಾಗಲಿ ಎಂದು ಆಶಿಸಿದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಆನಂದ್, ಉಪಾಧ್ಯಕ್ಷೆ ಗೀತಾ, ಕಾರ್ಯದರ್ಶಿ ಸಚಿನ್, ನಿರ್ದೇಶಕಿ ಪುಟ್ಟನಂಜಮ್ಮ ಮತ್ತು ಊರಿನ ಗಣ್ಯರು, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ನೇತ್ರಾವತಿ, ಮೇಲ್ವಿಚಾರಕಿ ರೇಖಾ, ಸೇವಾ ಪ್ರತಿನಿಧಿ ಸೌಮ್ಯಾ, ಗ್ರಾಮಸ್ಥರು ಭಾಗವಹಿಸಿದ್ದರು.