ಪಂಕಜ್ ಜೈನ್ ಅವರು ಮನೆಯ ಮುಂಬಾಗಿಲಿನ ಡೋರ್‌ಲಾಕ್ ತೆರೆದು ಮನೆಯೊಳಗೆ ಪ್ರವೇಶಿಸಿದಾಗ ಮೊದಲ ಮಹಡಿಗೆ ಹೋದಾಗ ರೂಮ್‌ನಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂತು. ನಮತರ ನಂತರ ಕಬೋರ್ಡ್ ನೋಡಿದಾಗ ಅಲ್ಲಿ ಇಟ್ಟಿದ್ದ 10 ಲಕ್ಷ ರೂ. ನಗದು ಇರಲಿಲ್ಲ. ಕೆಳ ಮಹಡಿಯ ರೂಮ್ಗೆ ಬಂದು ನೋಡಿದಾಗ ರೂಮ್ನ ಲಾಕರ್‌ನಲ್ಲಿಟ್ಟಿದ್ದ 6 ಚಿನ್ನದ ಬಳೆಗಳು, 2 ಚಿನ್ನದ ನಕ್ಲೆಸ್, ಒಂದು ಚಿನ್ನದ ಸರ, ಒಂದು ಚಿನ್ನದ ಮಂಗಳಸೂತ್ರ, 8 ಚಿನ್ನದ ಉಂಗುರಗಳು, 4 ಜೊತೆ ಚಿನ್ನದ ಓಲೆಗಳು (ಒಟ್ಟು 350 ಗ್ರಾಂ) ಹಾಗೂ 20 ಕೆ.ಜಿ ತೂಕದ ಬೆಳ್ಳಿಗಟ್ಟಿಗಳು ಕಳುವಾಗಿದೆ. ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.