ಮನೆ ಬಾಗಿಲು ಮುರಿದು ಚಿನ್ನಾಭರಣ ಕಳವು

ಅಪರಾಧ
ಅಪರಾಧ
Published on
ಮೈಸೂರು: ನಗರದ ಎನ್.ಆರ್.ಮೊಹಲ್ಲಾದಲ್ಲಿ ಮನೆಯೊಂದರಲ್ಲಿ ಖದೀಮರು ಹಗಲಿನ ಸಮಯದಲ್ಲೇ ಬಾಗಿಲು ಮೀಟಿ 1.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ಎನ್.ಆರ್.ಮೊಹಲ್ಲಾ ನಿವಾಸಿ ಸೋಮಶೇಖರ್ ಮನೆಯಲ್ಲಿ ಮಂಗಳವಾರ ಕಳ್ಳತನವಾಗಿದ್ದು, ನೆಕ್ಲೆಸ್, ಓಲೆ-ಜುಮುಕಿ ಸೇರಿ ವಿವಿಧ ಚಿನ್ನಾಭರಣವನ್ನು ಖದೀಮರು ಕದ್ದೊಯ್ದಿದ್ದಾರೆ. ಈ ಸಂಬಂಧ ಎನ್.ಆರ್.ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸೋಮಶೇಖರ್ ಪುತ್ರಿ ವಾಹನ ಶೋರೂಂನಲ್ಲಿ ಜೂನಿಯರ್ ಅಕೌಂಟೆಂಟ್ ಆಗಿದ್ದು, ಅಂದು ಬೆಳಗ್ಗೆ ಕೆಲಸಕ್ಕೆ ತೆರಳಿದ ಬಳಿಕ ಅವರ ಸಹೋದರ ಮನೆಗೆ ಬೀಗ ಹಾಕಿಕೊಂಡು ಕಾಲೇಜಿಗೆ ಹೋಗಿದ್ದ. ಸಂಜೆ 5 ಗಂಟೆಗೆ ಸೋಮಶೇಖರ್ ಮನೆಗೆ ಬಂದಾಗ ಬಾಗಿಲು ಮೀಟಿರವುದು ಕಂಡಿತು. ಮನೆ ಒಳ ಹೋಗಿ ನೋಡಿದಾಗ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ವಿಷಯ ತಿಳಿದ ಅವರ ಪುತ್ರಿ ಮನೆಗೆ ಬಂದು ಪರಿಶೀಲಿಸಿದಾಗ ಕೊಠಡಿಯಲ್ಲಿದ್ದ ಕಬ್ಬಿಣದ ಬೀರುವಿನ ಬೀಗ ಮುರಿದು, ಅದರಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವುದು ತಿಳಿದಿದೆ. ಈ ಸಂಬಂಧ ಸೋಮಶೇಖರ್ ಪುತ್ರಿ ದೂರು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net