‘ಹೋಟೆಲ್‌ನ ಒಳಚರಂಡಿ ಮಾರ್ಗಗಳು, ನೀರಿನ ಪೈಪ್‌ಗಳು, ಭೂಗತ ವಿದ್ಯುತ್ ಕೇಬಲ್‌ಗಳು ಹಾನಿಗೊಳಗಾಗಿವೆ. ನೀರಿನ ಹರಿವಿನಿಂದಾಗಿ ಕಾಂಪೌಂಡ್ ಗೋಡೆ, ಬೇಲಿ ಕುಸಿದಿದೆ. ಹೋಟೆಲ್ ನೆಲಮಹಡಿ ಕೊಳಚೆ ನೀರಿನಿಂದ ತುಂಬಿದ್ದು, ಅದನ್ನು ನಮ್ಮ ಸಿಬ್ಬಂದಿಯೇ ಹೊರಹಾಕಿದ್ದಾರೆ. ಹೂಳು ಶೇಖರಣೆ, ದುರ್ವಾಸನೆಯಿಂದಾಗಿ ಹೋಟೆಲ್ ಎಡಭಾಗದಲ್ಲಿರುವ ಕೊಠಡಿಗಳನ್ನು ಕನಿಷ್ಠ ಒಂದು ವಾರ ಬಾಡಿಗೆಗೆ ನೀಡಲಾಗುವುದಿಲ್ಲ. ಇದರಿಂದ ಲಕ್ಷಾಂತರ ರೂ.ನಷ್ಟವಾಗಿದೆ’ ಎಂದು ಹೋಟೆಲ್‌ನ ಪ್ರತಿನಿಧಿಯೊಬ್ಬರು ತಿಳಿಸಿದರು.