ಹೋಟೆಲ್ ಧ್ವಂಸ ಮಾಡಿದ್ದರಿಂದ 40 ಲಕ್ಷ ರೂ.ನಷ್ಟವಾಗಿದೆ ಎಂದು ಆರೋಪ
ಕುರ್ಚಿ, ಮೇಜು, ಅಲಂಕಾರಿಕ ಗಾಜು, ಎಸಿ, ಸಿಸಿ ಕ್ಯಾಮರಾಗಳನ್ನು ಒಡೆದು ಹಾಕಿದ್ದಲ್ಲದೇ ಕ್ಯಾಶ್ ಬಾಕ್ಸ್‌ನಲ್ಲಿದ್ದ 1.82 ಲಕ್ಷ ರೂ. ಕಾಣೆಯಾಗಿದೆ ಎಂದು ದೂರು
ಮೈಸೂರು: ಚಿನ್ನದ ವಂಚನೆ ಆರೋಪದಲ್ಲಿ ಬಂಧಿಯಾಗಿದ್ದ ಸೌಂದರ್ಯರಾಜ್ ಅಲಿಯಾಸ್ ಚಿನ್ನತಂಬಿಗೆ ಸೇರಿದ ಹೋಟೆಲ್ ಮೇಲೆ ದಾಳಿ ಮಾಡಿದ ಆರು ಜನರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ಚಿನ್ನತಂಬಿಗೆ ನ್ಯಾಯಾಲಯದಲ್ಲಿ ಜಾಮೀನು ದೊರೆತಿತ್ತು. ಇದರಿಂದ ರೊಚ್ಚಿಗೆದ್ದ ನೂರಾರು ಜನರು, ನಮ್ಮ ಹಣ, ಚಿನ್ನಾಭರಣ ವಾಪಸ್ ಕೊಡಿಸುವಂತೆ ಶ್ರೀರಾಂಪುರ 2ನೇ ಹಂತದಲ್ಲಿರುವ ಚಿನ್ನತಂಬಿಗೆ ಸೇರಿದ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ ಪೀಠೋಪಕರಣ, ಗಾಜುಗಳನ್ನು ಒಡೆದು ಹಾಕಿದ್ದರು.
ಹೋಟೆಲ್ ಧ್ವಂಸ ಮಾಡಿದ್ದರಿಂದ 40 ಲಕ್ಷ ರೂ.ನಷ್ಟವಾಗಿದೆ ಎಂದು ರೆಸ್ಟೋರೆಂಟ್‌ನ ಉಸ್ತುವಾರಿ ಕವಿತಾಶ್ರೀ ನೀಡಿದ ದೂರಿನ ಮೇಲೆ ಪೂರ್ಣಿಮಾ, ಅಮಿತ್, ಪವಿತ್ರಾ, ಲೋಕೇಶ್, ಮಹೇಶ್ ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕುರ್ಚಿ, ಮೇಜು, ಅಲಂಕಾರಿಕ ಗಾಜು, ಎಸಿ, ಸಿಸಿ ಕ್ಯಾಮರಾಗಳನ್ನು ಒಡೆದು ಹಾಕಿದ್ದಲ್ಲದೇ ಕ್ಯಾಶ್ ಬಾಕ್ಸ್‌ನಲ್ಲಿದ್ದ 1.82 ಲಕ್ಷ ರೂ. ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.