ಜೆ.ಪಿ.ನಗರದಲ್ಲಿ ಪರಿವರ್ತನಂ ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನಿಂದ ಸ್ಥಾಪಿತವಾದ ಹಿರಿಯ ನಾಗರಿಕರಿಗೆ ವೃದ್ಧಾಶ್ರಮ ಹಾಗೂ ಮಕ್ಕಳ ಅನಾಥಾಶ್ರಮವನ್ನು ಉದ್ಘಾಟಿಸಲಾಯಿತು. ಎಚ್.ಎನ್.ಶ್ರೀಧರ್‌ಮೂರ್ತಿ, ವೀಣಾ, ಸಿ.ಎಸ್.ರಘು, ವಿಕ್ರಂ ಅಯ್ಯಂಗಾರ್, ವಿನಯ್ ಕಣಗಾಲ್, ಕೆ.ಎಸ್.ಮಮತಾ, ಪವನ್ ಇತರರು ಇದ್ದರು.
ನಿರಾಶ್ರಿತರಿಗೆ ಊಟ ವಸತಿ ನೀಡುವ ಸದುದ್ದೇಶದಿಂದ ವೃದ್ಧಾಶ್ರಮ ಮತ್ತು ಅನಾಥಾಶ್ರಮ ಆರಂಭ
ಮೈಸೂರು:
ಜೆ.ಪಿ.ನಗರದಲ್ಲಿ ಪರಿವರ್ತನಂ ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನಿಂದ ಸ್ಥಾಪಿತವಾದ ಹಿರಿಯ ನಾಗರಿಕರಿಗೆ ವೃದ್ಧಾಶ್ರಮ ಹಾಗೂ ಮಕ್ಕಳ ಅನಾಥಾಶ್ರಮವನ್ನು ಉದ್ಘಾಟಿಸಲಾಯಿತು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎಚ್.ಎನ್.ಶ್ರೀಧರ್‌ಮೂರ್ತಿ ಮಾತನಾಡಿ, ಪರಿವರ್ತನಂ ಟ್ರಸ್ಟ್ ಸುಮಾರು ಹದಿನೈದು ವರ್ಷದಿಂದ ಸಾಮಾಜಿಕ ಕಾರ್ಯದಲ್ಲಿ ಸೇವೆ ಮಾಡುತ್ತಿದೆ. ಈಗ ನಿರಾಶ್ರಿತರಿಗೆ ಊಟ ವಸತಿ ನೀಡುವ ಸದುದ್ದೇಶದಿಂದ ವೃದ್ಧಾಶ್ರಮ ಮತ್ತು ಅನಾಥಾಶ್ರಮ ಆರಂಭಿಸಿದೆ ಎಂದು ಹೇಳಿದರು.
ಮುಂದೆ ಸಮಾರಂಭಗಳಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಕಲೆಹಾಕಿ ಹಸಿದವರಿಗೆ ನೀಡುವ ಕಾರ್ಯಕ್ರಮ ಸಹ ಪರಿವರ್ತನಂ ಟ್ರಸ್ಟ್‌ನಿಂದ ಕೈಗೆತ್ತಿಕೊಂಡಲ್ಲಿ ನಾವೂ ಸಹ ಕೈ ಜೋಡಿಸುತ್ತೇವೆ ಎಂದರು.
ಸಮಾಜ ಸೇವಕರಾದ ವೀಣಾ, ಸಿ.ಎಸ್.ರಘು, ವಿಕ್ರಂ ಅಯ್ಯಂಗಾರ್, ಪರಿವರ್ತನಮ್ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳಾದ ವಿನಯ್ ಕಣಗಾಲ್, ಪವನ್, ಸತೀಶ್ ಕುಮಾರ್, ಕೆ.ಎಸ್.ಮಮತಾ, ರವಿಕುಮಾರ್, ಸಿ.ಎಸ್.ಶರಣ್, ರಾಕೇಶ್ ಇತರರು ಇದ್ದರು.