3 ಕೋಟಿ ವೆಚ್ಚದಲ್ಲಿ ಹೆಬ್ಬಾಳು ಸೇತುವೆ ಮರುನಿರ್ಮಾಣ

 ಕೆ.ಆರ್.ನಗರ ತಾಲೂಕಿನ ಸಿದ್ದಾಪುರ ಗ್ರಾಮದ ಬಳಿ ಇರುವ ನಾಲೆ ಸೇತುವೆ ಮರುನಿರ್ಮಾಣ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಭೂಮಿಪೂಜೆ ನೆರವೇರಿಸಿದರು. ಎಂ.ಎಸ್.ಮಹದೇವ್, ಸಿದ್ದಾಪುರ ರಮೇಶ್, ವಿಜಯ್, ಕಂಚುಗಾರಕೊಪ್ಪಲು ಕೆ.ಟಿ.ನಾಗರಾಜು, ರಾಘು, ಮಹದೇವ, ಜಿ.ಕೆ.ಸಿದ್ದೇಶ್ವರಪ್ರಸಾದ್ ಇತರರು ಇದ್ದರು.
ಕೆ.ಆರ್.ನಗರ ತಾಲೂಕಿನ ಸಿದ್ದಾಪುರ ಗ್ರಾಮದ ಬಳಿ ಇರುವ ನಾಲೆ ಸೇತುವೆ ಮರುನಿರ್ಮಾಣ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಭೂಮಿಪೂಜೆ ನೆರವೇರಿಸಿದರು. ಎಂ.ಎಸ್.ಮಹದೇವ್, ಸಿದ್ದಾಪುರ ರಮೇಶ್, ವಿಜಯ್, ಕಂಚುಗಾರಕೊಪ್ಪಲು ಕೆ.ಟಿ.ನಾಗರಾಜು, ರಾಘು, ಮಹದೇವ, ಜಿ.ಕೆ.ಸಿದ್ದೇಶ್ವರಪ್ರಸಾದ್ ಇತರರು ಇದ್ದರು.
Published on
ಕೆ.ಆರ್.ನಗರ: ವಾಹನಗಳ ಸುಗಮ ಸಂಚಾರ ಹಾಗೂ ರೈತರ ಜಮಿನುಗಳಿಗೆ ಸರಾಗವಾಗಿ ನೀರು ಹರಿಸಬೇಕೆಂಬ ಉದ್ದೇಶದಿಂದ ಶಿಥಿಲಗೊಂಡ ಸೇತುವೆ ಮರುನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಡಿ.ರವಿಶಂಕರ್ ಮಾಹಿತಿ ನೀಡಿದರು.
ತಾಲೂಕಿನ ಹೆಬ್ಬಾಳು ಮತ್ತು ಸಿದ್ದಾಪುರ ಗ್ರಾಮಗಳ ಬಳಿ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಮುಖ್ಯರಸ್ತೆಯ ಸೇತುವೆಗಳ ಮರುನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಹೆಬ್ಬಾಳು ಸೇತುವೆಗೆ 3 ಕೋಟಿ ರೂ. ಹಾಗೂ ಸಿದ್ದಾಪುರಕ್ಕೆ ಗ್ರಾಮದ ಪರಿಮಿತಿ ಮುಖ್ಯರಸ್ತೆಯ ಸೇತುವೆ ನಿರ್ಮಾಣಕ್ಕೆ 1 ಕೋಟಿ ರೂ. ಲೋಕೋಪಯೋಗಿ ಇಲಾಖೆಯಿಂದ ಮಂಜೂರು ಮಾಡಲಾಗಿದೆ ಎಂದರು.
ಕೆ.ಆರ್.ನಗರದಿಂದ ಕೇರಳಾಪುರ ಸಂಪರ್ಕ ರಸ್ತೆಯಾಗಿರುವ ಹೆಬ್ಬಾಳಿನ ಸೇತುವೆ ಮೇಲೆ ಸಾಕಷ್ಟು ವಾಹನಗಳು ಸಂಚರಿಸುವುದರಿಂದ ಗುಣಮಟ್ಟದ ಕಾಮಗಾರಿ ಮಾಡುವ ಜತೆಗೆ ಮುಂದೆ ರಸ್ತೆ ವಿಸ್ತರಣೆಯಾದರೂ ಸೇತುವೆ ಬಳಕೆಗೆ ಬರುವಂತೆ ನಿರ್ಮಿಸಬೇಕು ಎಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿ ಅವರು ಕೆ.ಆರ್.ನಗರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದು, ಈಗಾಗಲೇ ಹಲವು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಂಡಿದ್ದು ಮತ್ತಷ್ಟು ರಸ್ತೆಗಳನ್ನು ಅಭಿವೃದ್ಧಿಗೆ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕುಗಳನ್ನು ಸರ್ಕಾರ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದೆ. ರೈತರ ನೆರವಿಗೆ ನಮ್ಮ ಸರ್ಕಾರ ಸದಾಕಾಲ ಸ್ಪಂದಿಸುತ್ತದೆ. ನಿಮಗೆ ಆಗಬೇಕಾದ ಯಾವುದೇ ಅನುಕೂಲಗಳನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು. ಈಗ ನದಿ ನೀರನ್ನು ಕೆರೆ-ಕಟ್ಟೆ ತುಂಬಿಸಲು ಬಿಡಲಾಗಿದೆ. ಪಶು,ಪ್ರಾಣಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರ‌್ನಹಳ್ಳಿ ಶಿವಣ್ಣ, ನಗರಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಎಂ.ಎಸ್.ಅನಂತ್, ಗ್ರಾಪಂ ಮಾಜಿ ಸದಸ್ಯರಾದ ವೆಂಕಟರಾಮ್, ಎಚ್.ಎಂ.ಮಂಜು, ಮುಖಂಡರಾದ ಸಿದ್ದಾಪುರ ರಮೇಶ್, ವಿಜಯ್, ಪ್ರಕಾಶ್, ಕಂಚುಗಾರಕೊಪ್ಪಲು ಕೆ.ಟಿ.ನಾಗರಾಜು, ರಾಘು, ಮಹದೇವ, ಲೋಕೋಪಯೋಗಿ ಇಲಾಖೆ ಎಇಇ ಜಿ.ಕೆ.ಸಿದ್ದೇಶ್ವರಪ್ರಸಾದ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net