ಕೊಣಸೂರಿನಲ್ಲಿ ಆರೋಗ್ಯ ತಪಾಸಣೆ ಶಿಬಿರ

ಕೊಣಸೂರಿನ ಆಯುಷ್ ಆರೋಗ್ಯ ಮಂದಿರದಲ್ಲಿ ಮಧುಮೇಹ ತಪಾಸಣೆ ಶಿಬಿರ ನಡೆಯಿತು.
ಕೊಣಸೂರಿನ ಆಯುಷ್ ಆರೋಗ್ಯ ಮಂದಿರದಲ್ಲಿ ಮಧುಮೇಹ ತಪಾಸಣೆ ಶಿಬಿರ ನಡೆಯಿತು.
Published on
ಬೆಟ್ಟದಪುರ: ಸಮೀಪದ ಕೊಣಸೂರಿನ ಆಯುಷ್ ಆರೋಗ್ಯ ಮಂದಿರದಲ್ಲಿ ಇತ್ತೀಚೆಗೆ ಮಧುಮೇಹ ತಪಾಸಣೆ ಉಚಿತ ಶಿಬಿರ ನಡೆಯಿತು.
ಕೇಂದ್ರದ ವೈದ್ಯಾಧಿಕಾರಿ ಡಾ.ದಿನೇಶ್ ಮಾತನಾಡಿ, ಆಯುರ್ವೇದ ಔಷಧಗಳು ಮತ್ತು ಔಷಧ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು. ಯೋಗ ತರಬೇತಿದಾರರಾದ ಆಶಾ ಮಹದೇವರಾವ್ ಮಾತನಾಡಿ, ನಿತ್ಯ ಯೋಗ ಅಭ್ಯಾಸ ಮಾಡಿದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಪುನೀತ್, ಸಿಬ್ಬಂದಿ ರವಿಶಂಕರ್, ಮಂಜುನಾಥ್, ಮುಖಂಡರಾದ ಶಂಕರಪ್ಪ, ಮೂರ್ತಿ, ಮಲ್ಲೇಶ್, ಗ್ರಾಮಸ್ಥರು, ಶಿಬಿರಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net