ಕೇಕ್ ಕತ್ತರಿಸಿ ಎಚ್‌ಡಿಕೆ ಹುಟ್ಟುಹಬ್ಬ ಆಚರಣೆ

ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಪಿರಿಯಾಪಟ್ಟಣದ ಮಸಣಿಕಮ್ಮ ದೇವಸ್ಥಾನದ ಬಳಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಪಿ.ಎಂ.ಪ್ರಸನ್ನ, ಕೆ.ಸುರೇಶ್, ಪಿ.ಕೆ. ವಿಜಯ್ ಕುಮಾರ್ ಇತರರು ಇದ್ದರು.
ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಪಿರಿಯಾಪಟ್ಟಣದ ಮಸಣಿಕಮ್ಮ ದೇವಸ್ಥಾನದ ಬಳಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಪಿ.ಎಂ.ಪ್ರಸನ್ನ, ಕೆ.ಸುರೇಶ್, ಪಿ.ಕೆ. ವಿಜಯ್ ಕುಮಾರ್ ಇತರರು ಇದ್ದರು.
Published on
ಪಿರಿಯಾಪಟ್ಟಣ: ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮೈಮುಲ್ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಪಿ.ಎಂ.ಪ್ರಸನ್ನ ನೇತೃತ್ವದಲ್ಲಿ ಪಟ್ಟಣದ ಮಸಣಿಕಮ್ಮ ದೇವಸ್ಥಾನದ ಬಳಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ, ನಮ್ಮ ನಾಯಕ ಕುಮಾರಣ್ಣ ಅವರು ರಾಜ್ಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳು ಬಡವರು, ರೈತ ಮಹಿಳೆಯರು ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುವಂತಿತ್ತು. ರಾಜ್ಯದಲ್ಲಿ ರೈತರ ಬಗ್ಗೆ ಚಿಂತನೆ ಮಾಡುವವರು ಕುಮಾರಣ್ಣ ಮಾತ್ರ. ಭವಿಷ್ಯದಲ್ಲಿ ರಾಜ್ಯ ಅಭಿವೃದ್ಧಿಗೆ, ರೈತರ ಅಭಿವೃದ್ಧಿಯಾಗಲು, ಬಡವರಿಗೆ ನ್ಯಾಯ ಒದಗಿಸಲು ಕುಮಾರಣ್ಣ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಮಾತನಾಡಿ, ಕುಮಾರಸ್ವಾಮಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದೀಗ ಗುಣಮುಖರಾಗುತ್ತಿದ್ದಾರೆ. ಈ ಸಂದರ್ಭದಲ್ಲಿಯೂ ರಾಜ್ಯದಲ್ಲಿ ರೈತರು, ಜನಪರ ಸರ್ಕಾರ ರಚನೆ ಮಾಡಬೇಕೆಂಬ ಉದ್ದೇಶದಿಂದ ಪಕ್ಷ ಸಂಘಟನೆ ಮಾಡಿಕೊಂಡು ಜನರ ಬಳಿಗೆ ಹೋಗುತ್ತಿದ್ದಾರೆ. ದೇವರು ಅವರಿಗೆ ಹೆಚ್ಚಿನ ಆರೋಗ್ಯವನ್ನು ಕೊಟ್ಟು ರೈತ ಹಾಗೂ ಜನಪರವಾದ ಸರ್ಕಾರ ತರುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸಿ.ಎನ್.ರವಿ, ಕೆ.ಸುರೇಶ್, ಮುಖಂಡರಾದ ಎಸ್.ರಾಮು, ಗಗನ್ ಗೌಡ, ಕೆ.ಕುಮಾರ, ಲೋಕೇಶ್, ಮಹದೇವ ಕಿರಂಗೂರು, ಮುತ್ತುರಾಜು, ಪರಮೇಶ್, ಎ.ಟಿ.ರಂಗಸ್ವಾಮಿ, ಪ್ರೀತಿ ಅರಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net