ಮಹಿಳೆಯರ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ

ಎಚ್.ಡಿ.ಕೋಟೆ ತಾಲೂಕಿನ ಹೆಗ್ಗಡಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಗಣಪತಿ ಹೋಮ, ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸೌಮ್ಯಾ ಅನಿಲ್ ಉದ್ಘಾಟಿಸಿದರು. ಪಡುವಲು ವಿರಕ್ತ ಮಠದ ಮಠಾಧ್ಯಕ್ಷ ಶ್ರೀಮಹದೇವ ಸ್ವಾಮೀಜಿ, ಗಣಪತಿ ಹೋಮ ಸಮಿತಿ ಅಧ್ಯಕ್ಷ ಎಚ್.ಎಸ್.ಮಂಜುನಾಯಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ ಮತ್ತಿತರರಿದ್ದರು.
ಎಚ್.ಡಿ.ಕೋಟೆ ತಾಲೂಕಿನ ಹೆಗ್ಗಡಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಗಣಪತಿ ಹೋಮ, ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸೌಮ್ಯಾ ಅನಿಲ್ ಉದ್ಘಾಟಿಸಿದರು. ಪಡುವಲು ವಿರಕ್ತ ಮಠದ ಮಠಾಧ್ಯಕ್ಷ ಶ್ರೀಮಹದೇವ ಸ್ವಾಮೀಜಿ, ಗಣಪತಿ ಹೋಮ ಸಮಿತಿ ಅಧ್ಯಕ್ಷ ಎಚ್.ಎಸ್.ಮಂಜುನಾಯಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ ಮತ್ತಿತರರಿದ್ದರು.
Published on
ಎಚ್.ಡಿ.ಕೋಟೆ: ಮಹಿಳೆಯರ ಸಬಲೀಕರಣಕ್ಕಾಗಿ ಮತ್ತು ಆರ್ಥಿಕವಾಗಿ ಮುಂಬರಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದು ಸೌಮ್ಯಾ ಅನಿಲ್‌ಚಿಕ್ಕಮಾದು ತಿಳಿಸಿದರು.
ತಾಲೂಕಿನ ಹೆಗ್ಗಡಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಾಗೂ ಹೆಗ್ಗಡಾಪುರ ಗ್ರಾಮಸ್ಥರ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮೂಹಿಕ ಗಣಪತಿ ಹೋಮ ಮತ್ತು ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಯೋಜನೆ ರೂಪಿಸುವುದಕ್ಕೂ ಮೊದಲೇ ಮಹಿಳೆಯರ ಏಳಿಗೆಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಿತ್ತು. ಉಳಿತಾಯದ ಜತೆಗೆ ಮಹಿಳೆಯರು ವ್ಯವಸಾಯಕ್ಕೆ ಅನುವಾಗುವಂತೆ ಕಿರುಸಾಲ ಸೌಲಭ್ಯಗಳನ್ನು ಪಡೆದು ಕಡಿಮೆ ಬಡ್ಡಿ ದರದಲ್ಲಿ ವಾಪಸ್ ಮಾಡುತ್ತಿರುವುದೂ ನನ್ನ ಗಮನಕ್ಕೆ ಬಂದಿದೆ, ಇದೇ ರೀತಿ ಮುಂದಿನ ದಿನಗಳಲ್ಲಿ ಮುಂದುವರಿದು ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದರು.
ತೆರಣಿಮುಂಟಿ ಗ್ರಾಮದ ರವಿರಾಮೇಶ್ವರ ದೇವಾಲಯದ ಅರ್ಚಕ ಭಾಸ್ಕರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅರಣ್ಯ ನಾಶದಿಂದಾಗಿ ಕಾಡಿನಿಂದ ಕಾಡು ಪ್ರಾಣಿಗಳು ಹೊರಬುತ್ತಿವೆ. ಹಿಂದೆ ಎಚ್.ಡಿ.ಕೋಟೆ ತಾಲೂಕು ಬಹುತೇಕ ಕಾಡಿನಿಂದ ಕೂಡಿತ್ತು, ದಿನ ಕಳೆದಂತೆ ಕಾಡಿನ ಪ್ರಮಾಣ ಕಡಿಮೆಯಾಗಿದೆ, ಇದರಿಂದಾಗಿಯೂ ಕಾಡುಪ್ರಾಣಿಗಳು ನಾಡಿನತ್ತ ಧಾವಿಸುತ್ತಿವೆ ಎಂದರು.
ಪಡುವಲು ವಿರಕ್ತ ಮಠದ ಮಠಾಧ್ಯಕ್ಷ ಶ್ರೀಮಹದೇವ ಸ್ವಾಮೀಜಿ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಗಳನ್ನು ತಲುಪಿಸುವಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸಫಲವಾಗಿದೆ ಎಂದು ತಿಳಿಸಿದರು.
ಮನುಷ್ಯನು ಜೀವನದಲ್ಲಿ ಸಾರ್ಥಕತೆಯನ್ನು ಗಳಿಸಿಕೊಳ್ಳಲು ಧಾರ್ಮಿಕ ಸಭೆ, ಸಮಾರಂಭಗಳು ಸಹಕಾರಿಯಾಗಿವೆ. ನಿತ್ಯ ಜೀವನದಲ್ಲಿ ಸಹಬಾಳ್ಮೆಯಿಂದ ಬದುಕಿದಾಗ ಸಾರ್ಥಕತೆ ದೊರೆಯಲಿದೆ ಎಂದರು.
ಗಣಪತಿ ಹೋಮ ಸಮಿತಿ ಅಧ್ಯಕ್ಷ ಎಚ್.ಎಸ್.ಮಂಜುನಾಯಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ, ತಾಲೂಕು ಯೋಜನಾಧಿಕಾರಿ ವಿ.ಭಾಸ್ಕರ್, ನಾಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದ್ರಮ್ಮ ಮಹದೇವು, ಉಪಾಧ್ಯಕ್ಷ ಸ್ವಾಮಿ, ಸದಸ್ಯರಾದ ಎಚ್.ಸಿ.ರವಿ, ಲಕ್ಷ್ಮೀಕುಮಾರ್, ಚಿಕ್ಕದೇವಮ್ಮ ಮಂಜುನಾಥ, ಸೋಮಾಚಾರ್, ಎಚ್.ಟಿ.ಶೇಖರ್, ಎಚ್.ಜೆ.ಶಂಕರ್, ಪ್ರೇಮಕುಮಾರ್, ದೇವನಾಯಕ, ಚಂದ್ರಪ್ರಸಾದ್, ಪ್ರಕಾಶ್, ಸಿದ್ದಪ್ಪಾಜಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್, ವಲಯ ಮೇಲ್ವಿಚಾರಕಿ ಎಚ್.ಎಲ್.ಭಾರತಿ, ಶಂಭು, ಶೇಖರ್, ಲೋಕೇಶ್, ನಾಗಮ್ಮ, ಪ್ರೇಮಚಂದ್ರ, ರಾಮರಾವ್, ಬೀರೇಗೌಡ, ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net