ಎಚ್.ಡಿ.ಕೋಟೆಯಲ್ಲಿ ಹನುಮದ್ ವ್ರತ ಸಂಭ್ರಮ

ಎಚ್.ಡಿ.ಕೋಟೆ ಪಟ್ಟಣದ ಕನಕ ಭವನದಲ್ಲಿ ಹನುಮದ್ ವ್ರತ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಿದ ಜನಸ್ತೋಮ.
ಎಚ್.ಡಿ.ಕೋಟೆ ಪಟ್ಟಣದ ಕನಕ ಭವನದಲ್ಲಿ ಹನುಮದ್ ವ್ರತ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಿದ ಜನಸ್ತೋಮ.
Published on
ಎಚ್.ಡಿ.ಕೋಟೆ: ಪಟ್ಟಣದಲ್ಲಿ ಭಕ್ತಿ ಭಾವದಿಂದ ಹನುಮದ್ ವ್ರತ ಕಾರ್ಯಕ್ರಮ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ಕನಕ ಭವನದ ಆವರಣದಲ್ಲಿ ಹನುಮನ ರಥಕ್ಕೆ ಜನಪ್ರತಿನಿಧಿಗಳು, ವಿವಿಧ ಮಠಗಳ ಸ್ವಾಮೀಜಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ, ಪಡುವಲ ಮಠದ ಮಹಾದೇವ ಸ್ವಾಮೀಜಿ, ದಡದಹಳ್ಳಿ ಮಠದ ಷಡಕ್ಷರ ಸ್ವಾಮೀಜಿ, ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ರಾಜಕೀಯ ಗಣ್ಯರು ನಂದಿಕಂಬಕ್ಕೆ ಸಂಪ್ರದಾಯದಂತೆ ಪೂಜೆ ನೆರವೇರಿಸಿದರು.
ಮೆರವಣಿಗೆಯು ಕನಕ ಭವನದ ಆವರಣದಿಂದ ನಂದಿ ಕಂಬ, ವೀರಗಾಸೆ, ಡೊಳ್ಳು ಕುಣಿತ, ಚಂಡೆ, ನಗಾರಿ, ಪಿಲಿಪಿಲಿ ಗೊಂಬೆ, ಪಟಕುಣಿತ, ಆದಿವಾಸಿಗಳ ನೃತ್ಯ, ಯುವಕರ ಕುಣಿತದೊಂದಿಗೆ ಹುಣಸೂರು-ಬೇಗೂರು ಮುಖ್ಯ ರಸ್ತೆಯಲ್ಲಿ ಸಾಗಿ ವರದರಾಜ ಸ್ವಾಮಿ ದೇವಾಯದ ಆವರಣದಲ್ಲಿ ಸಂಪನ್ನಗೊಂಡಿತು.
ಮಠಾಧೀಶರನ್ನು ತೆರೆದ ವಾಹನದಲ್ಲಿ ಕನಕ ಭವನದ ಆವರಣದಿಂದ ವರದರಾಜಸ್ವಾಮಿ ದೇವಸ್ಥಾನದ ಆವರಣದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಮೆರವಣಿಗೆಯಲ್ಲಿ ಹನುಮನ ಭಕ್ತರು ಕೇಸರಿ ಶಾಲು ಮತ್ತು ಧ್ವಜಗಳು ರಾರಾಜಿಸಿದವು. ಯಾವುದೇ ಅಹಿತಕರ ಘಟನೆ ಆಗದಂತೆ ಮೆರವಣಿಗೆ ಸಾಗಿತು. ಹುಣಸೂರು ಡಿವೈಎಸ್ಪಿ ರವಿ ನೇತೃತ್ವದಲ್ಲಿ ಪಟ್ಟಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗಂಗಾಧರ್ ಸೇರಿದಂತೆ ನಾಲ್ವರು ಇನ್‌ಸ್ಪೆಕ್ಟರ್, 250ಹೆಚ್ಚು ಪೊಲೀಸ್ ಸಿಬ್ಬಂದಿ, ಕೆಎಸ್‌ಆರ್‌ಪಿ ಬಂದೋಬಸ್ತಿನಲ್ಲಿ ಮೆರವಣಿಗೆ ನಡೆಯಿತು.
ಪಟ್ಟಣ ಸೇರಿದಂತೆ ತಾಲೂಕಿನ ಬೇರೆಬೇರೆ ಗ್ರಾಮಗಳಿಂದ ಸಾವಿರಾರು ಹನುಮ ಭಕ್ತರು ಹನುಮದ್ ವ್ರತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ದಾರಿಯುದ್ದಕ್ಕೂ ವಿವಿಧ ಸಂಘಗಳ ಮುಖಂಡರು ಮೆರವಣಿಗೆಯಲ್ಲಿ ಸಾಗಿ ಬಂದ ಹನುಮನ ಭಕ್ತರಿಗೆ ಮಜ್ಜಿಗೆ, ಪಾನಕ, ಕುಡಿಯುವ ನೀರು ಸೇರಿದಂತೆ ತಂಪು ಪಾನೀಯ ನೀಡಿ ದಣಿವು ಹಾರಿಸಿದರು. ವರದರಾಜ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರಸಾದ ವಿತರಿಸಲಾಯಿತು.
ಮೆರವಣಿಗೆಯಲ್ಲಿ ಜಯಪ್ರಕಾಶ್ ಚಿಕ್ಕಣ್ಣ, ಕೃಷ್ಣ ನಾಯಕ, ರುದ್ರಪ್ಪ, ವೆಂಕಟಸ್ವಾಮಿ, ಬೆಳ್ತೂರು ನಿಂಗರಾಜು, ಹನುಮ ಸೇವ ಸಮಿತಿ ತಾಲೂಕು ಅಧ್ಯಕ್ಷ ಬಿಡಗಲು ರಾಜು, ಹನುಮ ಸೇವಾ ಸಮಿತಿ ಉಪಾಧ್ಯಕ್ಷ ಮಗ್ಗೆ ರೂಪೇಶ್, ಪ್ರಧಾನ ಕಾರ್ಯದರ್ಶಿ ಮುತ್ತುರಾಜ್, ಕೋಶಾಧ್ಯಕ್ಷ ಕನ್ನಡ ಪ್ರಮೋದ್, ಹನುಮ ಸೇವ ಸಮಿತಿ ಮಾಜಿ ಅಧ್ಯಕ್ಷರಾದ ಡೇರಿ ಶ್ರೀಕಾಂತ್, ಚಂದ್ರಮೌಳಿ, ಜಯಂತ್, ನಂದೀಶ್, ಪ್ರಚಾರ ಸಮಿ ಸಂಚಾಲಕ ಸುಧಾಕರ್, ಕಾನೂನು ಸಲಹೆಗಾರ ನಾಗೇಶ್, ಹಣಕಾಸು ಸಮಿತಿ ಸಹ ಸಂಚಾಲಕ ಸುರೇಶ್, ನಗರ ಅಲಂಕಾರ ಸಮಿತಿ ಸಂಚಾಲಕ ಪ್ರಶಾಂತ್, ಅಕ್ಷಯ್, ಮಂಜುನಾಥ್, ಮಹೇಶ, ಸಂತೋಷ್, ಅಶೋಕ್, ಸುರೇಶ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net