ಗಂಧನಹಳ್ಳಿಯಲ್ಲಿ ಹನುಮಂತ, ಕನಕನ ಮೂರ್ತಿ ಮೆರವಣಿಗೆ

ಕೆ.ಆರ್.ನಗರ ತಾಲೂಕು ಗಂಧನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹನುಮದ ವ್ರತ ಮತ್ತು ಕನಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಂಸಿಡಿಸಿಸಿ ಬ್ಯಾಂಕ್ ನಿರ್ದೆಶಕ ದೊಡ್ಡಸ್ವಾಮೇಗೌಡ ಅವರನ್ನು ಸನ್ಮಾನಿಸಲಾಯಿತು. ಕುರುಬರ ಸಂಘದ ಜಿಲ್ಲಾ ನಿರ್ದೇಶಕ ಗಂಧನಹಳ್ಳಿ ಹೇಮಂತ್, ತಾಲೂಕು ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ಜಿ.ಕೆ.ಮಹದೇವ್ ಸೇರಿದಂತೆ ಇನ್ನಿತರರು ಇದ್ದರು.
ಕೆ.ಆರ್.ನಗರ ತಾಲೂಕು ಗಂಧನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹನುಮದ ವ್ರತ ಮತ್ತು ಕನಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಂಸಿಡಿಸಿಸಿ ಬ್ಯಾಂಕ್ ನಿರ್ದೆಶಕ ದೊಡ್ಡಸ್ವಾಮೇಗೌಡ ಅವರನ್ನು ಸನ್ಮಾನಿಸಲಾಯಿತು. ಕುರುಬರ ಸಂಘದ ಜಿಲ್ಲಾ ನಿರ್ದೇಶಕ ಗಂಧನಹಳ್ಳಿ ಹೇಮಂತ್, ತಾಲೂಕು ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ಜಿ.ಕೆ.ಮಹದೇವ್ ಸೇರಿದಂತೆ ಇನ್ನಿತರರು ಇದ್ದರು.
Published on

ಕೇಸರಿ, ಹಳದಿ ಬಣ್ಣದ ಬಾವುಟಗಳಿಂದ ರಾರಾಜಿಸಿದ ಗ್ರಾಮ

ಕೆ.ಆರ್.ನಗರ: ತಾಲೂಕಿನ ಗಂಧನಹಳ್ಳಿ ಗ್ರಾಮದ ಶ್ರೀ ಸಂತಕವಿ ಭಕ್ತಕನಕದಾಸ ಯುವಕರ ಸಂಘದ ವತಿಯಿಂದ 16ನೇ ವರ್ಷದ ಹನುಮದ್ ವ್ರತ ಮತ್ತು ಕನಕ ಜಯಂತಿ ಕಾರ್ಯಕ್ರಮವನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಇತ್ತೀಚೆಗೆ ವಿಜೃಂಭಣೆಯಿಂದ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.
ಜಯಂತಿ ಕಾರ್ಯಕ್ರಮದ ಅಂಗವಾಗಿ ಇಡೀ ಗ್ರಾಮವನ್ನು ವಿದ್ಯುತ್ ದೀಪಾಲಂಕಾರ ಮತ್ತು ಹಸಿರು ತಳಿರು ತೋರಣಗಳಿಂದ ಸಿಂಗರಿಸಿದ ಕಾರಣ ಇಡೀ ಗಂಧನಹಳ್ಳಿ ಮದುವಣಗಿತ್ತಿಯಂತೆ ಶೃಂಗಾರಗೊಂಡು ಕಂಗೊಳಿಸುತ್ತಿತ್ತು. ಹಳದಿ ಹಾಗೂ ಕೇಸರಿ ಶಾಲು ಧರಿಸಿದ ಯುವಕರು ಇಡೀ ಗ್ರಾಮದಲ್ಲಿ ನೆರೆದು ಸಂಭ್ರಮಿಸಿದ್ದರಿಂದ ಇಡೀ ಗ್ರಾಮದಲ್ಲಿ ಕೇಸರಿ ಹಾಗೂ ಹಳದಿ ಬಣ್ಣದ ಬಾವುಟಗಳು ರಾರಾಜಿಸಿದವು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಹನುಮಂತನ ಹಾಗೂ ಕನಕದಾಸರ ಉತ್ಸವ ಮೂರ್ತಿಗಳನ್ನು ಹೂವಿನ ಪಲ್ಲಕ್ಕಿಯೊಂದಿಗೆ ವೀರಗಾಸೆ, ಗೊಂಬೆಕುಣಿತ, ಪೂಜಾಕುಣಿತ ಹಾಗೂ ಇನ್ನಿತರ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ವಿಜೃಂಭಣೆಯಿಂದ ನಡೆದ ಮೆರವಣಿಗೆ ಎಲ್ಲರ ಮನಸೂರೆಗೊಂಡಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಯುವ ಜನತೆ ಜೈಶ್ರೀರಾಮ್, ಜೈಹನುಮಾನ್, ಜೈ ಭಕ್ತಕನಕದಾಸ ಎಂಬ ಘೋಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು.
ನಂತರ ಸಂಜೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಳವಳ್ಳಿ ಮಹದೇವಸ್ವಾಮಿ ಅವರಿಂದ ನಡೆದ ಸುಗಮ ಸಂಗೀತ ಕಾರ್ಯಕ್ರಮವು ಎಲ್ಲರನ್ನು ಭಕ್ತಿಯ ಕಡಲಲ್ಲಿ ತೇಲುವಂತೆ ಮಾಡಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ರವಿಶಂಕರ್, ಎಂಸಿಡಿಸಿಸಿ ಬ್ಯಾಂಕ್ ನಿರ್ದೆಶಕ ದೊಡ್ಡಸ್ವಾಮಿಗೌಡ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಗಂಧನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಾಂಧಿ ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಮಾಜಿ ಸದಸ್ಯ ಜಿ.ಎಸ್.ಮಂಜುನಾಥ್, ಕುರುಬರ ಸಂಘದ ಜಿಲ್ಲಾ ನಿರ್ದೇಶಕ ಗಂಧನಹಳ್ಳಿ ಹೇಮಂತ್, ತಾಲೂಕು ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ಜಿ.ಕೆ.ಮಹದೇವ್, ಗ್ರಾಮದ ದೊಡ್ಡ ಯಜಮಾನ ಜಿ.ಎನ್.ರಘು, ಪಿಎಲ್‌ಡಿ ಬ್ಯಾಂಕ್ ನಿರ್ದೆಶಕ ಡಿ.ಜೆ.ರಾಹುಲ್ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net