ಶಾಂತಿಯುತ ಹನುಮದ್ ವ್ರತ ಆಚರಣೆಗೆ ಸಹಕರಿಸಿ

ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಹನುಮದ್ ವ್ರತಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿದರು. ಡಿವೈಎಸ್ಪಿ ಶ್ರೀಕಾಂತ್, ಇನ್ಸ್‌ಪೆಕ್ಟರ್ ಎಸ್. ಗಂಗಾಧರ್, ಬಿಡುಗಲು ರಾಜು ಇತರರು ಇದ್ದರು.
ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಹನುಮದ್ ವ್ರತಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿದರು. ಡಿವೈಎಸ್ಪಿ ಶ್ರೀಕಾಂತ್, ಇನ್ಸ್‌ಪೆಕ್ಟರ್ ಎಸ್. ಗಂಗಾಧರ್, ಬಿಡುಗಲು ರಾಜು ಇತರರು ಇದ್ದರು.
Published on
ಎಚ್.ಡಿ. ಕೋಟೆ : ಪಟ್ಟಣದಲ್ಲಿ ಡಿ.20ರಂದು ಆಯೋಜಿಸಿರುವ ಹನುಮದ ವ್ರತ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಪೊಲೀಸ್ ಇಲಾಖೆ, ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಹನುಮದ್ ವ್ರತಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣದಲ್ಲಿ ಮೂರು ದಿನಗಳ ಕಾಲ ಹನುಮ ಸೇವಾ ಸಮಿತಿ ಮತ್ತು ಸಾರ್ವಜನಿಕರ ಸಹಕಾರದಲ್ಲಿ ಹನುಮದ್ ವ್ರತ ನೆರವೇರಲಿದೆ. ಈ ವೇಳೆ ಯಾರಿಗೂ ತೊಂದರೆ ಆಗದ ರೀತಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶಾಂತಿ ಮತ್ತು ಸೌಹಾರ್ದತೆಯಿಂದ ಹನುಮದ್ ವ್ರತ ಆಚರಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಬೇಕು ಎಂದು ಕೋರಿದರು.
ಡಿವೈಎಸ್ಪಿ ಶ್ರೀಕಾಂತ್ ಮಾತನಾಡಿ, ಮೆರವಣಿಗೆಯಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳ, ಚಲನಚಿತ್ರ ನಟರ ಭಾವಚಿತ್ರಗಳನ್ನು ಪ್ರದರ್ಶನ ಮಾಡುವಂತಿಲ್ಲ. ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಆರೋಗ್ಯ ಇಲಾಖೆಯಿಂದ ತಪಾಸಣೆಗೊಳಪಟ್ಟ ಪ್ರಸಾದವನ್ನು ಮಾತ್ರ ವಿತರಿಸಬೇಕು ಎಂದು ಸೂಚಿಸಿದರು. ಎಂಟು ವರ್ಷಗಳಿಂದ ಪಟ್ಟಣದಲ್ಲಿ ಹನುಮದ್ ವ್ರತ ಆಚರಿಸುತ್ತಾ ಬಂದಿದ್ದು, ಇದುವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಅದೇ ರೀತಿ ಈ ಬಾರಿಯೂ ಮುಂದುವರಿಯಲಿ ಎಂದು ತಿಳಿಸಿದರು.
ಹನುಮ ಸೇವಾ ಸಮಿತಿ ಅಧ್ಯಕ್ಷ ಬಿಡುಗಲು ರಾಜು ಮಾತನಾಡಿ, ಈ ಬಾರಿಯ ಹನುಮದ್ ವ್ರತಾಚರಣೆಗೆ ಹೆಚ್ಚಿನ ಭಕ್ತರು ಆಗಮಿಸಲಿದ್ದಾರೆ. ತಾಲೂಕಿನಾದ್ಯಂತ ಪ್ರಚಾರ ಮಾಡಲಾಗಿದ್ದು, ಕರಪತ್ರಗಳನ್ನೂ ಹಂಚಲಾಗಿದೆ. ವಿವಿಧ ಮಠಾಧೀಶರು, ಶಾಸಕ ಅನಿಲ್ ಚಿಕ್ಕಮಾದು, ಸಂಸದ ಸುನಿಲ್ ಬೋಸ್, ತಾಲೂಕಿನ ಮಾಜಿ ಶಾಸಕರು ಹಾಗೂ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ನೀಡಬೇಕು ಎಂದು ಮನವಿ ಮಾಡಿದರು.
ಇನ್ಸ್‌ಪೆಕ್ಟರ್ ಎಸ್. ಗಂಗಾಧರ್ ಮಾತನಾಡಿ, ಹನುಮದ್ ವ್ರತಾಚರಣೆ ಅಂಗವಾಗಿ ಪಟ್ಟಣದಲ್ಲಿರುವ ಎಲ್ಲ ಮದ್ಯದ ಅಂಗಡಿಗಳನ್ನು ಡಿ. 20ರಂದು ಬಂದ್ ಮಾಡುವಂತೆ ಆದೇಶಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ಸುರೇಶ್, ಎಸ್.ಐ. ಚಿಕ್ಕನಾಯಕ, ಸುರೇಶ್ ನಾಯಕ, ಹನುಮ ಸೇವಾ ಸಮಿತಿ ಉಪಾಧ್ಯಕ್ಷ ರೂಪೇಶ್, ಮಾಜಿ ಅಧ್ಯಕ್ಷರಾದ ಡೈರಿ ಶ್ರೀಕಾಂತ್, ಚಂದ್ರಮೌಳೇಶ್ವರ್, ಮುತ್ತುರಾಜು, ಕನ್ನಡ ಪ್ರಮೋದ, ನಾಗೇಶ್, ಸುರೇಶ್, ಪ್ರಶಾಂತ್, ಮಹೇಶ್, ಸಂತೋಷ್, ನಾಗಪುರುಷೋತ್ತಮ ಪಂಡಿತ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net