ಸರಗೂರು ತಾಲೂಕಿನ ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 100 ದಿನದ ಹ್ಯಾಂಡಲ್ ಎಕ್ಸ್ ರೇ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್, ಡಾ.ಶರತ್, ಮಹೇಶ್ ಇತರರು ಇದ್ದರು.
ಸರಗೂರು: ಕ್ಷಯರೋಗವನ್ನು ಪ್ರಾರಂಭದಲ್ಲಿಯೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ 100 ದಿನಗಳ ಹ್ಯಾಂಡಲ್ ಎಕ್ಸ್‌ರೇ ಅಭಿಯಾನ ಪ್ರಾರಂಭಿಸಿದ್ದು, ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ತಿಳಿಸಿದರು.
ತಾಲೂಕಿನ ಸಾಗರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ, ಅಪಾಯಕಾರಿ ಪ್ರದೇಶದಲ್ಲಿರುವರಿಗೆ ಉಚಿತವಾಗಿ ಎಕ್ಸ್‌ರೇ ಮಾಡುತ್ತಿದ್ದೇವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶರತ್ ಮಾತನಾಡಿದರು. ಶಿಬಿರದಲ್ಲಿ 44 ಜನರಿಗೆ ಹ್ಯಾಂಡಲ್ ಎಕ್ಸ್‌ರೇ ಮಾಡಲಾಯಿತು, 28 ಜನರ ಕಫ ಸಂಗ್ರಹಣೆ ಮಾಡಲಾಯಿತು.
ಅಧಿಕಾರಿಗಳಾದ ಮಹೇಶ್, ಸುಮಾ, ನಾಗರಾಜು, ಉಮೇಶ್, ಶರಣಪ್ಪ, ರವಿರಾಜ್, ರಾಮು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕೃಷ್ಣ, ಪೃಥ್ವಿ, ಆಶಾ, ಬಿಂದು, ರತ್ನಾ, ಪುಷ್ಪಲತಾ, ಮಾಚಿ, ತಾಲೂಕು ಸಂಯೋಜಕ ರಘು, ಆಶಾ ಕಾರ್ಯಕರ್ತರು, ಸಾರ್ವಜನಿಕರು ಇದ್ದರು.