ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ (ಜೆಇ) ಆಗಿ ಕರ್ತವ್ಯ ನಿರ್ವಹಿಸಿ, ಪದೋನ್ನತಿ ಹೊಂದಿ ಎಚ್.ಡಿ.ಕೋಟೆಗೆ ವರ್ಗಾವಣೆಯಾದ ಪ್ರಭಾಕರ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ದಾ.ರಾ.ಮಹೇಶ್, ಎನ್.ಕೆ.ಮಹದೇವ್, ಶಂಕರ್, ಜಯರಾಮ್ ಇತರರಿದ್ದಾರೆ.
Published on:
Copied
Follow Us
ಹನಗೋಡು: ಹುಣಸೂರು ಲೋಕೋಪಯೋಗಿ ಇಲಾಖೆಯಲ್ಲಿ 15 ವರ್ಷಗಳಿಂದ ಸಹಾಯಕ ಇಂಜಿನಿಯರ್ (ಜೆಇ) ಆಗಿ ಕರ್ತವ್ಯ ನಿರ್ವಹಿಸಿ, ಇದೀಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎಇಇ) ಆಗಿ ಪದೋನ್ನತಿ ಹೊಂದಿ ಎಚ್.ಡಿ.ಕೋಟೆಗೆ ವರ್ಗಾವಣೆಯಾಗಿರುವ ಪ್ರಭಾಕರ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ದೊಡ್ಡಹೆಜ್ಜೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಾ.ರಾ.ಮಹೇಶ್ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ, ಸಮಯಪಾಲನೆ ಮತ್ತು ಜನಸ್ನೇಹಿ ಮನೋಭಾವವನ್ನು ಅಳವಡಿಸಿಕೊಂಡಿರುವ ಪ್ರಭಾಕರ್ ಅವರು ಇಲಾಖೆಗೆ ಉತ್ತಮ ಹೆಸರು ತಂದುಕೊಟ್ಟ ಅಧಿಕಾರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಮೈಸೂರು ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಮಾತನಾಡಿ, ಹನಗೋಡು ಹಾಗೂ ಹುಣಸೂರು ಭಾಗದ ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿರುವ ಪ್ರಭಾಕರ್ ಅವರು ಜನಸಾಮಾನ್ಯರಿಗೆ ಸುಲಭವಾಗಿ ಸಿಗುವ ಅಧಿಕಾರಿಯಾಗಿದ್ದರು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಇಇ ಪ್ರಭಾಕರ್, ಹುಣಸೂರು ತಾಲೂಕಿನಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸುವ ಅವಕಾಶ ದೊರೆತದ್ದು ಸ್ಮರಣೀಯ ಘಟ್ಟವಾಗಿದೆ. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಪತ್ರಕರ್ತರು ಹಾಗೂ ಸಾರ್ವಜನಿಕರು ನೀಡಿದ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾದರು.
ಶಂಕರ್, ಜಯರಾಮ್, ಪ್ರದೀಪ್, ದೀಪು, ರಾಘವೇಂದ್ರ, ಶ್ರೀಧರ್, ರವಿ ವಡ್ಡಂಬಾಳು, ಗುರುಸ್ವಾಮಿ ಇತರರಿದ್ದರು.