ಸಾಮರ್ಥ್ಯ ಅರಿಯಲು ಹ್ಯಾಕಥಾನ್ ಸಹಕಾರಿ

ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸೌಮ್ಯಾ ಎನ್.ಸ್ವಾಮಿ, ಆದರ್ಶ್ ಸುಂದ್ರ, ಡಾ.ಎ.ಎನ್.ಸಂತೋಷ್ ಕುಮಾರ್, ಡಾ.ಸಿ.ನಟರಾಜು, ಡಾ.ಎಸ್.ಎ.ಧನರಾಜ್ ಮತ್ತಿತರರು ಇದ್ದರು.
ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸೌಮ್ಯಾ ಎನ್.ಸ್ವಾಮಿ, ಆದರ್ಶ್ ಸುಂದ್ರ, ಡಾ.ಎ.ಎನ್.ಸಂತೋಷ್ ಕುಮಾರ್, ಡಾ.ಸಿ.ನಟರಾಜು, ಡಾ.ಎಸ್.ಎ.ಧನರಾಜ್ ಮತ್ತಿತರರು ಇದ್ದರು.
Published on
ಹ್ಯಾಕಥಾನ್‌ಗಳು ಶೈಕ್ಷಣಿಕ ಮತ್ತು ಉದ್ಯಮಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡುತ್ತವೆ ಎಂದು ವೆಲ್ಸ್ ಾರ್ಗೋ ಸಂಸ್ಥೆ ಉಪಾಧ್ಯಕ್ಷೆ ಸೌಮ್ಯಾ ಎನ್.ಸ್ವಾಮಿ ತಿಳಿಸಿದರು.
ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಹ್ಯಾಕ್ ಒಲಿಂಪಿಕ್ಸ್‌ಗೆ ಚಾಲನೆ ನೀಡಿ ಮಾತನಾಡಿ, ಉದ್ಯಮಕ್ಕೆ ಬೇಕಾಗಿರುವ ನವೀನ ಪರಿಹಾರಗಳನ್ನು ನಿಮ್ಮಂತಹ ಯುವ ಮನಸ್ಸುಗಳಿಂದಲೇ ನಿರೀಕ್ಷಿಸಲಾಗುತ್ತಿದೆ ಎಂದು ಅವರು, ಇತ್ತೀಚೆಗೆ ನಡೆದ ಒಂದು ಅಂತಾರಾಷ್ಟ್ರೀಯ ಹ್ಯಾಕಥಾನ್‌ನಲ್ಲಿ ಸುಮಾರು 1700 ವಿದ್ಯಾರ್ಥಿಗಳು ಭಾಗವಹಿಸಿ ವಿಶೇಷವಾಗಿ ಸೈಬರ್ ಭದ್ರತೆ ಮತ್ತು ಬ್ಲಾೃಕ್‌ಚೈನ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತೋರಿದ ಆವಿಷ್ಕಾರಾತ್ಮಕ ಚಿಂತನೆಗಳ ಬಗ್ಗೆ ವಿವರಿಸಿದರು.
ಹ್ಯಾಕಥಾನ್‌ಗಳು ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಲು, ಹೊಸ ಅನುಭವಗಳನ್ನು ಸಂಗ್ರಹಿಸಲು ಮತ್ತು ನಿಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು ಅವಕಾಶ ನೀಡುತ್ತವೆ. ಇಂದಿನ ಹ್ಯಾಕಥಾನ್‌ಗಳಲ್ಲಿ ಕೃತಕ ಬುದ್ಧಿಮತ್ತೆ, ಸ್ಮಾರ್ಟ್ ಸಿಟಿಗಳು, ನಗರಾಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಗಮನಹರಿಸಲಾಗುತ್ತಿದೆ. ಈ ಮೂಲಕ ಯುವ ಪ್ರತಿಭೆಗಳು ಭವಿಷ್ಯದ ಸವಾಲುಗಳಿಗೆ ತಯಾರಾಗುತ್ತಿರುವುದು ಗಮನಾರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹ್ಯಾಕಥಾನ್‌ನಂತಹ ಹೊಸ ಪ್ರಯತ್ನಗಳಲ್ಲಿ ತಪ್ಪುಗಳು ಸಹಜ. ಅದಕ್ಕೆ ಭಯಪಡದೆ ಮುಂದೆ ಸಾಗಬೇಕು. ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಪ್ರತಿಭೆಗಳಿಗಾಗಿ ಆಯೋಜಿಸುತ್ತಿರುವ ರಾಷ್ಟ್ರೀಯ ಮಟ್ಟದ ಈ ಕಾರ್ಯಕ್ರಮ ಕೇವಲ ಸ್ಪರ್ಧೆ ಅಲ್ಲ, ಅವು ನವೀನ ಆಲೋಚನೆಗಳನ್ನು ಅನ್ವೇಷಿಸಲು ಮತ್ತು ವಾಸ್ತವ ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಮಹತ್ವದ ವೇದಿಕೆಗಳಾಗಿವೆ. ಈ 24 ಗಂಟೆಗಳ ಹ್ಯಾಕಥಾನ್‌ಅನ್ನು ಕೇವಲ ಸ್ಪರ್ಧೆಯಾಗಿ ನೋಡಬೇಡಿ. ಇದು ನಿಮ್ಮ ಆಲೋಚನೆಗಳನ್ನು ಪರೀಕ್ಷಿಸುವ ಮತ್ತು ಹೊಸ ದಿಕ್ಕಿನಲ್ಲಿ ಚಿಂತಿಸುವ ಅವಕಾಶವಾಗಿದೆ ಎಂದು ತಿಳಿಸಿದರು.
ಎಕ್ಸಲ್‌ಸ್‌ಟಾನ ಆದರ್ಶ್ ಸುಂದ್ರ, ಕುಲಪತಿ ಡಾ.ಎ.ಎನ್.ಸಂತೋಷ್‌ಕುಮಾರ್, ಪ್ರಾಂಶುಪಾಲ ಡಾ.ಸಿ.ನಟರಾಜು, ಡಾ.ಎಸ್.ಎ.ಧನರಾಜ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net