ಸಿಐಐಎಲ್ ನಿರ್ದೇಶಕ ಪ್ರೊ. ಬಸವರಾಜ ಕೊಡಗುಂಟಿ ಮಾತನಾಡಿ, ಭಾರತೀಯ ವ್ಯಾಕರಣ ಪರಂಪರೆಯನ್ನು ಸಂಸ್ಕೃತಕ್ಕೆ ಮಾತ್ರ ಸೀಮಿತಗೊಳಿಸಲಾಗುವುದಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಪಾಲಿ, ಪ್ರಾಕೃತ ಸೇರಿದಂತೆ ಹಲವು ಭಾಷೆಗಳು ತಮ್ಮದೇ ಆದ ವ್ಯಾಕರಣ ಪರಂಪರೆ ಮತ್ತು ಇತಿಹಾಸ ಹೊಂದಿವೆ. ವಿವಿಧ ಭಾಷಾ ಪರಂಪರೆಗಳ ನಡುವಿನ ಪರಸ್ಪರ ಸಂಪರ್ಕವು ಭಾರತದ ಬೌದ್ಧಿಕ ಇತಿಹಾಸದ ಪ್ರಮುಖ ಅಂಶವಾಗಿದೆ ಎಂದರು.