ಮೂರು ದಶಕಗಳಷ್ಟು ಹಳೆಯದಾಗಿರುವ ಕಟ್ಟಡವನ್ನು ಒಳ ರೋಗಿಗಳ ದಾಖಲೆಗೆ ಬಳಸಿಕೊಳ್ಳಲಾಗುತ್ತಿದೆ. ಕೆಲವು ವರ್ಷಗಳ ಹಿಂದೆಯಷ್ಟೇ ಹೊರ ರೋಗಿಗಳ ವಿಭಾಗವನ್ನು ಪ್ರತ್ಯೇಕಿಸಿ ಹೊಸದೊಂದು ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿ ಔಷಧ ವಿತರಣೆ, ಔಷಧ ಉಗ್ರಾಣ, ಶಸ್ತ್ರ ಚಿಕಿತ್ಸಾ ಘಟಕ, ಆಯುಷ್ ಘಟಕ, ಚರ್ಮ ರೋಗ, ಮೂಳೆ ಮತ್ತು ಕೀಲು, ತುರ್ತು ಚಿಕಿತ್ಸಾ ವಿಭಾಗ, ಸ್ತ್ರೀರೋಗ ಮತ್ತು ಪ್ರಸೂತಿ, ಚುಚ್ಚು ಮದ್ದು, ಸ್ಕಾೃನಿಂಗ್, ಲ್ಯಾಬ್ ಮತ್ತು ಎಕ್ಸ್ ರೇ ಕೊಠಡಿಗಳು ಇವೆ. ಹೀಗಿದ್ದರೂ ಇದು ನಿತ್ಯ ಬರುವ ರೋಗಿಗಳಿಗೆ ತೃಪ್ತಿಕರ ಸೌಲಭ್ಯ ನೀಡುವಲ್ಲಿ ವಿಫಲವಾಗಿದೆ ಎಂಬುದು ಜನರ ದೂರು. ಈ ಬಗ್ಗೆ ಸಾರ್ವಜನಿಕರು ವಿಜಯವಾಣಿ ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.