ರಂಗಭೂಮಿಗೆ ಕಡಿಮೆಯಾಗುತ್ತಿದೆ ಸರ್ಕಾರದ ಪ್ರೋತ್ಸಾಹ

ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಲಾವಿದರಿಗೆ ರಂಗ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಎಚ್.ಸಿ. ಮಂಜುನಾಥ್, ಪುಟ್ಟಸ್ವಾಮಿಗೌಡ, ಟಿ.ಎಂ.ಪ್ರಕಾಶ್, ವಕೀಲ ಸಿ.ಎನ್.ಕಾಂತರಾಜು ಇತರರಿದ್ದರು.
ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಲಾವಿದರಿಗೆ ರಂಗ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಎಚ್.ಸಿ. ಮಂಜುನಾಥ್, ಪುಟ್ಟಸ್ವಾಮಿಗೌಡ, ಟಿ.ಎಂ.ಪ್ರಕಾಶ್, ವಕೀಲ ಸಿ.ಎನ್.ಕಾಂತರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ರಂಗಭೂಮಿ ದಿನಾಚರಣೆ
ಮಳವಳ್ಳಿ: ನಾಟಕ ಮತ್ತು ರಂಗಭೂಮಿ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದು ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ. ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಕರ್ನಾಟಕ ನಾಟಕ ಅಕಾಡೆಮಿ, ರಂಗಬಂಡಿ ರಂಗಬಂಡಿ ಮಳವಳ್ಳಿ, ಯುನಿವರ್ಸಲ್ ಸೇವಾ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಸಂತೋತ್ಸವ, ರಂಗ ಗೌರವ, ವಿಚಾರ ಸಂಕಿರಣ, ನಾಟಕಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಮಳವಳ್ಳಿ ಅಂಬೇಡ್ಕರ್ ಭವನದಲ್ಲಿ ನಡೆದ ನಾಟಕೋತ್ಸವದಲ್ಲಿ ನಾಟಕ ಪ್ರದರ್ಶನದ ದೃಶ್ಯ.
ನೆಪ ಮಾತ್ರಕ್ಕೆ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳನ್ನು ರಚನೆ ಮಾಡುವ ಸರ್ಕಾರ, ಅವುಗಳಿಗೆ ಶಕ್ತಿ ತುಂಬುವ ಕೆಲಸ ಮಾಡುವಲ್ಲಿ ವಿಫಲವಾಗಿವೆ. ಅಕಾಡೆಮಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಿದರೆ, ರಂಗಭೂಮಿ ಕಲಾವಿದರಿಗೆ ಅನುಕೂಲವಾಗುತ್ತದೆ. ಸಾವಿರಾರು ಕೋಟಿ ರೂ. ಬಜೆಟ್ ಮಂಡಿಸುವ ಸರ್ಕಾರಗಳಿಗೆ ಅಕಾಡೆಮಿಗಳು, ಪ್ರಾಧಿಕಾರಗಳಿಗೆ ಅನುದಾನ ನೀಡುವುದು ಯಾವ ಲೆಕ್ಕ ಎಂದ ಅವರು, ರಂಗಭೂಮಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.
ಹೆಚ್ಚಿನ ಮಾಸಾಶನ ನೀಡಿ:
ಅನುದಾನದ ಹೆಚ್ಚಳದ ಸರ್ಕಾರದ ಜತೆಗೆ ಕಲಾವಿದರ ಬದುಕಿಗೆ ಹೆಚ್ಚಿನ ಮಾಸಾಶನ ನೀಡಬೇಕು. ಅವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನೆರವಿಲ್ಲದೆ ಯುನಿವರ್ಸಲ್ ಸೇವಾ ಟ್ರಸ್ಟ್, ರಂಗಬಂಡಿ ಮಳವಳ್ಳಿ ವಿಶೇಷವಾಗಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದ್ದು, ಇಂದಿನ ಯುವಸಮೂಹ ರಂಗಭೂಮಿಯ ಜಾಗೃತಿ, ಹವ್ಯಾಸವನ್ನು ರೂಢಿಸಬೇಕು ಎಂದರು.
ಬದುಕಿಗೆ ರಂಗಭೂಮಿ ದಾರಿ:
ನಿವೃತ್ತ ಪ್ರಾಂಶುಪಾಲ ಪುಟ್ಟಸ್ವಾಮಿಗೌಡ ಮಾತನಾಡಿ, ಹಿಂದಿನ ಕಾಲದಲ್ಲಿ ಗ್ರಾಮೀಣ ಜನರ ಬದುಕಿಗೆ ದಾರಿಯಾಗಿದ್ದ ರಂಗಭೂಮಿ ಕಲೆ ನಶಿಸುತ್ತಿದೆ ಎನ್ನುವ ಆತಂಕ ಕಾಡುತ್ತಿದೆ. ಶಾಲಾ-ಕಾಲೇಜಿನಿಂದಲೇ ವಿದ್ಯಾರ್ಥಿಗಳಲ್ಲಿ ರಂಗಭೂಮಿ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ. ಸಂಘ-ಸಂಸ್ಥೆಗಳೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಯುನಿವರ್ಸಲ್ ಸೇವಾ ಟ್ರಸ್ಟ್ ಕಾರ್ಯದರ್ಶಿ ಟಿ.ಎಂ.ಪ್ರಕಾಶ್, ವಕೀಲ ಸಿ.ಎನ್.ಕಾಂತರಾಜು, ಮಾತನಾಡಿದರು.
ಕಲಾವಿದರಾದ ಚೌಡೇಶ್ ವಡ್ಡರಹಳ್ಳಿ, ಜಯರಾಜು ಪೂರಿಗಾಲಿ, ಎ.ಎಸ್ .ದೇವರಾಜು, ತಳಗವಾದಿ ವೆಂಕಟೇಶ್, ಸಿ.ನಾಗರಾಜು, ಬುಲೆಟ್ ನಿಂಗಣ್ಣ, ಮಹದೇವಮ್ಮ ಅವರಿಗೆ ರಂಗ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಕರಾವಳಿ ನಿರ್ದಿಗಂತ ಪ್ರಸ್ತುತ ಪಡಿಸುವ ಲೋಹಿಯಾ ಅವರ ಲೇಖನಗಳ ಆಧಾರಿತ ರಾಮ ಕೃಷ್ಣ ಶಿವ ನಾಟಕ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಎಂ.ಎನ್.ಮಹೇಶ್ ಕುಮಾರ್, ಚಂದ್ರಮೋಹನ್, ಹೊನ್ನಯ್ಯ, ಎಚ್. ಮಲ್ಲಿಕಾರ್ಜುನಯ್ಯ, ರಂಗಬಂಡಿ ಮಳವಳ್ಳಿಯ ಮಧು ಮಳವಳ್ಳಿ, ಚಲನಚಿತ್ರ ನಿರ್ಮಾಪಕ ಚಿಕ್ಕೇಗೌಡ ಇತರರು ಇದ್ದರು.
-----------
28 ಎಂಎಲ್‌ವಿ 1
------
28 ಎಂಎಲ್‌ವಿ 2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net