ಕ್ರೀಡಾಂಗಣ ನಿರ್ಮಾಣ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ

ತಿ.ನರಸೀಪುರ ಪಟ್ಟಣದ ಕೆಎಸ್‌ಐಸಿ ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ನಿರ್ಧಾರವನ್ನು ಸರ್ಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ರೈತ ಸಂಘದಿಂದ ಸಸಿ ನೆಟ್ಟು ನೀರೆರೆದು ಸಂಭ್ರಮಿಸಲಾಯಿತು. ಈ.ರಾಜು, ಬೂದಹಳ್ಳಿ ಶಂಕರ್, ಸುಜ್ಜಲೂರು ಚಂದ್ರು, ಶಾಂತಮೂರ್ತಿ ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಕೆಎಸ್‌ಐಸಿ ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ನಿರ್ಧಾರವನ್ನು ಸರ್ಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ರೈತ ಸಂಘದಿಂದ ಸಸಿ ನೆಟ್ಟು ನೀರೆರೆದು ಸಂಭ್ರಮಿಸಲಾಯಿತು. ಈ.ರಾಜು, ಬೂದಹಳ್ಳಿ ಶಂಕರ್, ಸುಜ್ಜಲೂರು ಚಂದ್ರು, ಶಾಂತಮೂರ್ತಿ ಇತರರು ಇದ್ದರು.
Published on
ತಿ.ನರಸೀಪುರ : ಕೆಎಸ್‌ಐಸಿ ರೇಷ್ಮೆ ಕಾರ್ಖಾನೆ ನೂಲು ತೆಗೆಯುವ ಘಟಕದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿದೆ. ಇದು ಸಂಘಟನೆಗಳ ಸಂಘಟಿತ ಹೋರಾಟಕ್ಕೆ ಸಿಕ್ಕಿದ ಫಲ ಎಂದು ತಾಲೂಕು ರೈತ ಸಂಘದ ಮುಖಂಡರು ಹರ್ಷ ವ್ಯಕ್ತಪಡಿಸಿದರು.
ಕ್ರೀಡಾಂಗಣ ನಿರ್ಮಾಣವನ್ನು ಸರ್ಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಕೆಎಸ್‌ಐಸಿ ಆವರಣದಲ್ಲಿ ಬುಧವಾರ ತಾಲೂಕು ರೈತ ಸಂಘದ ಮುಖಂಡರು ಗಿಡಗಳನ್ನು ನೆಟ್ಟು ನೀರೆರೆದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ರೇಷ್ಮೆ ಕಾರ್ಖಾನೆ ಆವರಣದಲ್ಲಿ ತಾಲೂಕು ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ನಿರ್ಧರಿಸಿತ್ತು. ಈ ನಿರ್ಣಾಯದ ವಿರುದ್ಧ ತಾಲೂಕಿನ ಹಲವು ಸಂಘಟನೆಗಳು ಸತತ 15 ದಿನಗಳ ಕಾಲ ಕಾರ್ಮಿಕರ ಜತೆಗೂಡಿ ಧರಣಿ ನಡೆಸಿತ್ತು. ಎಲ್ಲ ಸಂಘಟನೆಗಳ ಒತ್ತಡಕ್ಕೆ ಮಣಿದ ಸರ್ಕಾರ ಸದರಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ. ಇದು ಎಲ್ಲ ಸಂಘಟನೆಗಳ ಸಂಘಟಿತ ಹೋರಾಟಕ್ಕೆ ಸಿಕ್ಕ ಪ್ರತಿಫಲ ಎಂದರು.
ಜಿಲ್ಲಾ ಮುಖಂಡ ಈ.ರಾಜು ಮಾತನಾಡಿ, ನಮ್ಮ ರಾಜ್ಯ ನಾಯಕರು ಮುಖ್ಯಮಂತ್ರಿಗಳನ್ನು ಖುದ್ದು ಭೇಟಿ ಮಾಡಿ ಕೆಎಸ್‌ಐಸಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡದಂತೆ ಮನವಿ ಸಲ್ಲಿಸಿದ್ದರು. ಎಲ್ಲ ಸಂಘಟನೆಗಳೂ ನಿರಂತರ ಹೋರಾಟ ನಡೆಸಿ ಜಯ ಸಾಧಿಸಿವೆ. ಕಾರ್ಖಾನೆಯಲ್ಲಿ ಮತ್ತಷ್ಟು ಯಂತ್ರಗಳನ್ನು ಅಳವಡಿಸಿ ಉದ್ಯೋಗ ಸೃಷ್ಟಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಬೂದಹಳ್ಳಿ ಶಂಕರ್ ಮಾತನಾಡಿ, ರೈತ ಮತ್ತು ಕಾರ್ಮಿಕರ ಹೋರಾಟದಿಂದ ಮೈಸೂರಿನ ಹೆಮ್ಮೆಯ ಕಾರ್ಖಾನೆ ಉಳಿದಿದೆ. ಹಾಗೆಯೇ ತಾಲೂಕಿಗೆ ಕ್ರೀಡಾಂಗಣ ಅನಿವಾರ್ಯತೆಯೂ ಇದೆ. ಹಾಗಾಗಿ ಕ್ರೀಡಾಂಗಣ ಹೋರಾಟ ಸಮಿತಿ ಕ್ರೀಡಾಂಗಣಕ್ಕಾಗಿ ಹೋರಾಟ ನಡೆಸಿದಲ್ಲಿ ರೈತ ಸಂಘ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಲಿದೆ ಎಂದರು.
ರೈತ ಸಂಘದ ಉಪಾಧ್ಯಕ್ಷ ತಲಕಾಡು ದಿನೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಜ್ಜಲೂರು ಚಂದ್ರಶೇಖರ್, ತಾಲೂಕು ಸಂಘಟನಾ ಶಾಂತಮೂರ್ತಿ, ಆಟೋ ರಮೇಶ್, ಮಾಡ್ರಹಳ್ಳಿ ನಂಜುಂಡ ಸ್ವಾಮಿ, ಎ.ಜಿ.ಮಹದೇವ, ಚಂದ್ರಶೇಖ, ಕುಳ್ಳೇಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net