ಗೂಡ್ಸ್ ಕ್ಯಾಂಟರ್ ಹಿಂದಿನಿಂದ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮೃತ

ಬೈಕ್ ಸವಾರ ಸ್ಥಳದಲ್ಲೇ ಮೃತ
ಬೈಕ್ ಸವಾರ ಸ್ಥಳದಲ್ಲೇ ಮೃತ
Published on
ತಿ.ನರಸೀಪುರ-ಮೈಸೂರು ರಸ್ತೆಯ ಗುರುಕಾರ್‌ಪುರ ಗೇಟ್ ಬಳಿ ಗೂಡ್ಸ್ ಕ್ಯಾಂಟರ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತಿ.ನರಸೀಪುರ ತಾಲೂಕಿನ ಎಸ್.ಮೇಗದಹಳ್ಳಿ ನಿವಾಸಿ ಎಸ್.ಪ್ರಭಾಕರ್ ಅಲಿಯಾಸ್ ನಿಂಗರಾಜು (41) ಮೃತಪಟ್ಟ ಬೈಕ್ ಸವಾರ.
ಮೈಸೂರಿನ ಮಾಲ್ ಆಫ್ ಮೈಸೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಪ್ರಭಾಕರ್, ಪ್ರತಿದಿನ ಕೆಲಸಕ್ಕೆ ಮನೆಯಿಂದ ತಮ್ಮ ಬೈಕ್‌ನಲ್ಲಿ ಬಂದು ಹೋಗುತ್ತಿದ್ದರು. ಒಂದೊಂದು ದಿನ ಬಸ್ಸಿನಲ್ಲಿ ಹೋಗಿ ಬರುತ್ತಿದ್ದರು. ಅದರಂತೆ ಮಂಗಳವಾರ ಸಹ ಬೈಕ್‌ನಲ್ಲಿ ಮೈಸೂರಿಗೆ ಹೋಗುತ್ತಿದ್ದಾಗ ದುರಂತ ನಡೆದಿದೆ.
ತಿ.ನರಸೀಪುರ ಕಡೆಯಿಂದ ಮೈಸೂರು ಕಡೆಗೆ ಪ್ರಭಾಕರ್ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಗೂಡ್ಸ್ ಕ್ಯಾಂಟರ್ ಅತಿವೇಗವಾಗಿ ಪ್ರಭಾಕರ್ ಅವರ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಗೂಡ್ಸ್ ಕ್ಯಾಂಟರ್ ಚಕ್ರಗಳು ಪ್ರಭಾಕರ್ ಮೇಲೆ ಹರಿದಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ಪ್ರಭಾಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತರ ತಂದೆ ಸಿದ್ದನಾಯಕ ಅವರು ನೀಡಿದ ದೂರಿನನ್ವಯ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net