'ಜಿಎಸ್‌ಎಸ್ ವಿದ್ಯಾರ್ಥಿ ರನ್ 2025’ ರನ್ 4ನೇ ಆವೃತ್ತಿಗೆ ಉತ್ತಮ ಪ್ರತಿಕ್ರಿಯೆ

ನಗರದ ಹರಿ ವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ‘ಜಿಎಸ್‌ಎಸ್ ವಿದ್ಯಾರ್ಥಿ ರನ್ 2025’ ರನ್ 4ನೇ ಆವೃತ್ತಿಗೆ ಯೋಗಾತ್ಮ ಶ್ರೀಹರಿ ದ್ವಾರಕಾನಾಥ್ ಚಾಲನೆ ನೀಡಿದರು. ಡಾ.ಎನ್.ಚಂದ್ರಶೇಖರ್, ಶ್ರೀನಿವಾಸ ಹೊಸಮನೆ, ಎಚ್.ಆರ್.ಭಗವಾನ್ ಇತರರಿದ್ದರು.
ನಗರದ ಹರಿ ವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ‘ಜಿಎಸ್‌ಎಸ್ ವಿದ್ಯಾರ್ಥಿ ರನ್ 2025’ ರನ್ 4ನೇ ಆವೃತ್ತಿಗೆ ಯೋಗಾತ್ಮ ಶ್ರೀಹರಿ ದ್ವಾರಕಾನಾಥ್ ಚಾಲನೆ ನೀಡಿದರು. ಡಾ.ಎನ್.ಚಂದ್ರಶೇಖರ್, ಶ್ರೀನಿವಾಸ ಹೊಸಮನೆ, ಎಚ್.ಆರ್.ಭಗವಾನ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಓಟದಲ್ಲಿ ವಿದ್ಯಾರ್ಥಿಗಳು, ಪಾಲಕರ ಸಂಭ್ರಮ
  • 400ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು
  • 1 ಕಿ.ಮೀ., 3 ಕಿ.ಮೀ. ಹಾಗೂ 5 ಕಿ.ಮೀ. ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ
ಮೈಸೂರು: ನಗರದ ಹರಿ ವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ‘ಜಿಎಸ್‌ಎಸ್ ವಿದ್ಯಾರ್ಥಿ ರನ್ 2025’ ರನ್ 4ನೇ ಆವೃತ್ತಿಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು.
400ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. 1 ಕಿ.ಮೀ., 3 ಕಿ.ಮೀ. ಹಾಗೂ 5 ಕಿ.ಮೀ. ಪ್ರತ್ಯೇಕ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಪಾಲಕರು ಓಡುವ ಮೂಲಕ ವಿಶೇಷ ಮೆರುಗು ತಂದರು.
ಬೋಗಾದಿಯ ಹರಿ ವಿದ್ಯಾಲಯದ ಮುಂಭಾಗದಿಂದ ಆರಂಭಗೊಂಡ ಓಟವು ಬೋಗಾದಿಯ ಪ್ರಮುಖ ರಸ್ತೆಗಳಲ್ಲಿ ಸಾಗಿ ಹರಿ ವಿದ್ಯಾಲಯದ ಬಳಿ ಅಂತ್ಯಗೊಂಡಿತು. ಓಟದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಓಟದ ಉದ್ದಕ್ಕೂ ನೀರು, ಹಣ್ಣು ನೀಡಲಾಯಿತು. ಸ್ಪರ್ಧೆಯ ನಂತರ ಶಾಲಾ ಆವರಣದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಇದಕ್ಕೂ ಮುನ್ನ ಯೋಗಾತ್ಮ ಶ್ರೀಹರಿ ದ್ವಾರಕಾನಾಥ್ ಓಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ವಿದ್ಯಾರ್ಥಿಗಳಿಗೆ ಆರೋಗ್ಯ, ನಿಯಮಿತ ವ್ಯಾಯಾಮ ಮತ್ತು ಜೀವನ ಶೈಲಿಯ ಮಹತ್ವದ ಬಗ್ಗೆ ಪ್ರೇರಣಾತ್ಮಕ ಸಂದೇಶ ನೀಡಿದರು. ಆದಿತ್ಯ ಆಸ್ಪತ್ರೆ ಅಧ್ಯಕ್ಷ ಡಾ.ಎನ್.ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರೀಡಾಭಿವೃದ್ಧಿ ಮತ್ತು ಮಾನಸಿಕ ಆರೋಗ್ಯದ ಅಗತ್ಯತೆಯನ್ನು ತಿಳಿಸಿದರು.
ಹರಿ ವಿದ್ಯಾಲಯದ ಅಧ್ಯಕ್ಷ ಶ್ರೀನಿವಾಸ ಹೊಸಮನೆ, ಕಾರ್ಯದರ್ಶಿ ಎಚ್.ಆರ್.ಭಗವಾನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net